ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ ಯಶಸ್ಸು ಸಾಧಿಸಿ: ನಿವೃತ್ತ ಕಂದಾಯ ನಿರೀಕ್ಷಕ ಟಿ.ಸಿ ಚಂದ್ರನ್

No comments
        TOC ಮಡಿಕೇರಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಲ್ಲಿಹುದಿಕೇರಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು "ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಿವೃತ್ತ ಕಂದಾಯ ನಿರೀಕ್ಷಕರಾದ ಟಿ.ಸಿ‌ ಚಂದ್ರನ್,‌" ಬಲವೇ ಜೀವನ " ದೌರ್ಬಲ್ಯವೇ ಮರಣ " ಎಂಬ ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಅರಿತು ಬಾಳಿ, ಅಲ್ಲದೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ , ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು.
ವಿದ್ಯಾರ್ಥಿಗಳು ಯೋಗ, ವ್ಯಾಯ್ಯಾಮ, ಧ್ಯಾನದ ಮೂಲಕ ದೈಹಿಕ ದೃಢತೆ, ಹಾಗೂ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು.
1893 ಚಿಕಾಗೋದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾನವೀಯ ಮೌಲ್ಯಗಳನ್ನು ಸಾರಿದ ವಿವೇಕಾನಂದರ ಪುಟ್ಟ ಭಾಷಣವನ್ನು ಜಗತ್ತು ಇಂದಿಗೂ ಸ್ಮರಿಸಿಕೊಳ್ಳುತ್ತಿದೆ.
ಅವರ ಅತ್ಯಲ್ಪ ಜೀವಿತಾವಧಿಯಲ್ಲಿ ಮಾಡಿದ ದೊಡ್ಡ ಸಾಧನೆಯಾಗಿದೆ.
ವಿದ್ಯಾರ್ಥಿಗಳು ವಿವೇಕಾನಂದರಂತೆ, ಬಡವರು, ದೀನ- ದಲಿತರು ಮತ್ತು ಮಹಿಳೆಯರನ್ನು ಗೌರವದಿಂದ ಕಾಣಬೇಕು, ಬಾಳಿಗೊಂದು ಗುರಿ ಅದನ್ನು ಸಾಧಿಸುವ ಶ್ರಧ್ದೆ, ಮತ್ತು ಛಲ ಇದ್ದಾಗ ವಿಭಿನ್ನವಾಗಿ ಯೋಚಿಸಿ ಕಾರ್ಯಗತಗೊಳಿಸಿದಾಗ ಅದ್ಭುತ ಸಾಧನೆ ಮಾಡಬಹುದು ಎಂದು ನಿವೃತ್ತ ಕಂದಾಯ ನಿರೀಕ್ಷಕ ಟಿ.ಸಿ‌ ಚಂದ್ರನ್  ಹೇಳಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ವಿಭಾಗದ ನೂತನ ಪ್ರಾಂಶುಪಾಲರಾದ ಅಂತೋಣಿ ಆಲ್ವರಿಸ್ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಸಮಾಜಮುಖಿ ತತ್ವಾದರ್ಶಗಳನ್ನು ಪಾಲಿಸಬೇಕೆಂದರು.
ವಿದ್ಯಾರ್ಥಿಗಳಾದ ಪೂಜಾ, ರೀನಾ,ಅನೂಷಾ, ಹಾಗೂ ರಶ್ಮಿಕಾ, ವಿವೇಕಾನಂದರ ವಿಚಾರಧಾರೆಗಳ ಕುರಿತು ಮಾತನಾಡಿದರು.
 ಸ್ವಾಮಿ ವಿವೇಕಾನಂದರ ಆದರ್ಶ ವಿಚಾರಧಾರೆ ಗಳನ್ನೊಳಗೊಂಡ ವಿವಿಧ ಬಗೆಯ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಿನಯ ಅವರ ಪ್ರಾರ್ಥನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ತನ್ಸೀರಾ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪನ್ಯಾಸಕಿ ಜಸ್ಟಿಮ್ ಕೊರಿಯಾ ಸ್ವಾಗತಿಸಿದರು.
ಈ ಸಂದರ್ಭ  ವೇದಿಕೆಯಲ್ಲಿ ಪ್ರಭಾರ ಪ್ರಾಂಶುಪಾಲರಾದ ಪಿ.ವಿ ಲೋಕೇಶ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ  ಪಿ.ಸಿ ಅಚ್ಚಯ್ಯ, ಪ್ರಾಂಶುಪಾಲರಾದ ಅನಿಲ್ ಕುಮಾರ್, ಉಪನ್ಯಾಸಕರಾದ ಭಾಗ್ಯಜ್ಯೋತಿ, ತುಳಸಿ ,ವಿಶ್ವನಾಥ್  ಇಸ್ಮಾಯಿಲ್ ,ಧನಂಜಯ್ ಇದ್ದರು.

No comments

Post a Comment