ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮದಿನಾಚರಣೆ

No comments
      ಸೋಮವಾರಪೇಟೆ TOC :-ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. 
ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಕೆ.ಬೋಪಯ್ಯನವರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿ ಅವರು ಫೀಲ್ಡ್ ಮಾರ್ಷಲ್ ರವರು ದೇಶದ ಮೂರು ಸೇನೆಗಳ ಮುಖ್ಯಸ್ಥರಾದ ಏಕೈಕ ವ್ಯಕ್ತಿಯಾಗಿದ್ದಾರೆ.ಭಾರತದ ಇತಿಹಾಸದಲ್ಲಿ ಮೂರು ಸೇನೆಗಳ ಮುಖ್ಯಸ್ಥ ಸ್ಥಾನವನ್ನು ವಹಿಸಿಕೊಂಡ ಮೊದಲ  ಭಾರತಿಯರಾಗಿ  ಕಂಗೊಳಿಸಿದ ಫೀಲ್ಡ್ ಮರ್ಷಲ್ ಬಹಳ ಶಿಸ್ತಿನ ವ್ಯಕ್ತಿತ್ವವನ್ನು ಹೊಂದಿದ್ದರು. ಭಾರತ ಚೀನಾ ಹೋರಾಟದ  ಸಂದರ್ಭದಲ್ಲಿ ಉತ್ತಮವಾಗಿ  ಸೇನೆಯೊಂದಿಗೆ ಹೋರಾಟ ಮಾಡಿ ಭಾರತಕ್ಕೆ ಜಯಗಳಿಸುವಲ್ಲಿ ಇವರ ಪಾತ್ರ ಅಪಾರವಾಗಿತ್ತು. ಇವರು ಇಂದಿನ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದಿ ಅನುಸರಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

No comments

Post a Comment