ಸೋಮವಾರಪೇಟೆ TOC :-ಕೊಡಗು ಜಿಲ್ಲೆಯ ಗಡಿ ಗ್ರಾಮವಾದ ವಣಗೂರು ಕೂಡುರಸ್ತೆಯಲ್ಲಿ ಕುಮಾರಲಿಂಗೇಶ್ವರ ದೇವಾಲಯದಲ್ಲಿ 349ನೇ ಜಾತ್ರಾ ಮಹೋತ್ಸವ ಗುರುವಾರ ನಡೆಯಿತು.
ಕೊಡಗು ಹಾಗೂ ಹಾಸನ ಜಿಲ್ಲೆಯ ಭಕ್ತಾದಿಗಳಿದ ಮುಡಿ ಕೋಡುವುದು, ಮದುವೆ ಕಾಣಿಕೆ ಒಪ್ಪಿಸುವುದು, ಕಹಳೆ ಪ್ರದರ್ಶನ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆದವು.
ಜಾತ್ರೆಯ ಪ್ರಯುಕ್ತ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಗಳು ನಡೆದವು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹೆಗ್ಗಡಲ್ಲಿ ಮಠದ ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ ,ಹಾಸನದ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಾತ್ರೆ ಪ್ರಯುಕ್ತ ಕಬಡ್ಡಿ ಹಾಗೂ ಥ್ರೋಬಾಲ್ ಸ್ಪರ್ಧೆಗಳು ನಡೆದವು. ದೇವಾಲಯದ ಆಡಳಿತ ಮಂಡಳಿ ಹಾಗೂ ಗೊದ್ದು, ತಂಬೈಲು,ಹುಡ್ರಮನೆ,ಕೊಂಗಳ್ಳಿ, ತಿಪ್ಪಳ್ಳಿ,ಬಾಣಗೇರಿ,ಮಾಗೇರಿ,ತಂಬಲಗೇರಿ,ದೊಡ್ಡಗದ್ದೆ ಸೋಮವಾರಪೇಟೆ ತಾಲೂಕಿನ,ಕೂತಿ,ತೋಳುರುಶೆಟ್ಟಳ್ಳಿ, ನಗರಳ್ಳಿ,ಶಾಂತಳ್ಳಿ, ಸೇರಿದಂತೆ ಮತ್ತಿತರ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ

No comments
Post a Comment