ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು 61ನೇ ಮಹಾರಥೋತ್ಸವ

No comments
           ಸೋಮವಾರಪೇಟೆ TOC: ಇಲ್ಲಿಗೆ ಸಮೀಪದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು 61ನೇ ಮಹಾರಥೋತ್ಸವ ಗುರುವಾರ ಸಹಸ್ರಾರು ಸಂಖ್ಕೆಯಲ್ಲಿ ನೆರೆದಿದ್ದ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರಧ್ದಾ ಭಕ್ತಿಯಿಂದ ನಡೆಯಿತು.
ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ವಿಧಿ ವಿದಾನಗಳು ನಡೆದವು. ನಿರಂತರವಾಗಿ ಅನಾದಿಕಾಲದಿಂದಲೂ ನಡೆದುಬಂದ ಪದ್ಧತಿಯ
ಮೆರೆ ಕೂತಿ ನಾಡು, ತೋಳುನಾಡು, ಪುಷ್ಫಗಿರಿ, ಯಡೂರು,
ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರಜಿಲ್ಲೆಯ ನೂರಾರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೋಂಡಿದ್ದರು. ಶಾಂತಳ್ಳಿಯ ರಥಬೀದಿಯಲ್ಲಿ ಹೊರಟ ರಥವನ್ನು ಭಕ್ತಾದಿಗಳು ದಾರಿಯ ಇಕ್ಕೆಲಗಳಲ್ಲೂ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು. ಈ ಸಂದರ್ಭ
ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್ ಖಜಾಂಚಿ ಡಿ.ಎಸ್. ಲಿಂಗರಾಜು, ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಧರ್ಮದರ್ಶಿ ಕೆ.ಎಸ್.
ಚಂದ್ರಾವತಿ, ಸದಸ್ಯ ಎಸ್.ಎ. ಪ್ರತಾಪ್ ವಿಧಾನಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ ಮತ್ತಿತರರು ಇದ್ದರು.
ಜಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಂಬಾರ ಮಂಡಳಿ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಸ್ಥಳಿಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ
ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಇಲ್ಲಿನ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಮೆರಗು ತಂದ ಕಲಾತಂಡಗಳು: ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪದೋತ್ಸವ ಸುಗ್ಗಿ ಹುಗ್ಗಿ ಕಲಾತಂಡಗಳು ಜಾತ್ರೆಗೆ ಮೆರಗು ತಂದಿತು.
ಮಂಡ್ಯದ ನಂದಿ ಧ್ವಜ, ಮೈಸೂರಿನ ಪಟ ಕುಣಿತ, ಡೊಳ್ಳು ಕುಣಿತ, ನಂಜನಗೂಡಿನ ಹುಲಿವೇಷ, ರಾಮನಗರದ ಪೂಜಾ ಕುಣಿತ, ಪಿರಿಯಾಪಟ್ಟಣದ ಕಂಸಾಳೆ, ಬಂಟ್ವಾಳದ ಚಿಲಿ ಪಿಲಿ ಬಳಗದ ಗೊಂಬೆಯಾಟ, ಕೀಲುಕುದುರೆ, ಚಿಕ್ಕಮಗಳೂರಿನ ಚಿಟ್ಟಿಮಾಳ, ಹಾವೇರಿಯ ಪುರವಂತಿಕೆ,
ಕಡೂರಿನ ಸೋಮನ ಕುಣಿತ, ಸೇರಿದಂತೆ ಹಲವು ತಂಡಗಳು ಪಾಲ್ಗೊಂಡಿದ್ದವು.
ಕಳೆದ 13ರಂದು ಸಂಜೆ 6.30ರಿಂದ ಬೆಳ್ಳಿ ಬಂಗಾರದ ದಿನದ ಜಾತ್ರೆಗೆ ಚಾಲನೆಗೊಂಡಿದ್ದು, 14ರಂದು ಮಕರ ಸಂಕ್ರಮಣ ಕರುವಿನ ಹಬ್ಬ, 15ರಂದು ಅರಸು ಬಲ ಸೇವೆ ನಡೆದವು.
17ರ ಶುಕ್ರವಾರ ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್
ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

No comments

Post a Comment