SKSBV ದಾರುಸ್ಸಲಾಂ ಮದರಸ ನೆಲ್ಯಹುದಿಕೇರಿ ವತಿಯಿಂದ ಜನರ ಜೀವ ರಕ್ಷಣೇ ಮಾಡಿದ 123 ಮಂದಿಗೆ ಸನ್ಮಾನ.


ನೆಲ್ಯಹುದಿಕೇರಿ (TOC ನ್ಯೂಸ್) :ದಾರುಸ್ಸಲಾಂ ಮದರಸಾ SKSBV. ನೆಲ್ಯಹುದಿಕೇರಿ ಇವರ ವತಿಯಿಂದ ಕಳೆದ ಆಗಸ್ಟ್ ತಿಂಗಳ ನದಿ ಪ್ರವಾಹದಲ್ಲಿ ಸಿಲುಕಿದ ಅವರನ್ನು ತಮ್ಮ ಪ್ರಾಣದ ಹಂಗನ್ನು ತೊರೆದು ರಕ್ಷಣೆ ಮಾಡಿದ ಜೀವರಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ನೆಲ್ಯಾಹುದಿಕೇರಿ ಬೆಟ್ಟದ ಕಾಡು ಕುಂಬಾರಗುಂಡಿ ಗುಹ್ಯ ಕರಡಿಗೋಡು ಭಾಗದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಮಹಾ ಪ್ರವಾಹದಲ್ಲಿ ಜನರ ಪ್ರಾಣರಕ್ಷಣೆ ಮಾಡಿದ ಸ್ವಯಂ ಸೇವಕರನ್ನು ಸನ್ಮಾನಿಸಲಾಯಿತು.


 . ಒ.ಎಂ.ಅಬ್ದುಲ್ಲಾ ಹಾಜೀ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸರ್ಕಲ್ ಇನ್ಸ್ಪೆಕ್ಟರ್ ಆದ ಅನುಪ್ ಮಾದಪ್ಪನವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಇಂತಹಾ ಪ್ರಕೃತಿ ವಿಕೋಪ ಮತ್ತೊಮ್ಮೆ ಮರುಕಳಿಸದಿರಲ್ಲಿ ಎಂದರು ಸಭೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ ಲೋಕೇಶ್ ಸಮಾಜ ಸೇವಕರಾದ ಪಿಆರ್ ಭರತ್ ಠಾಣಾಧಿಕಾರಿ ದಯಾನಂದ್ ಸಿದ್ದಾಪುರ ಅಭಿವೃದ್ಧಿ ಗ್ರಾಮಾಭಿವೃದ್ಧಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲ್ ರವರು ಹಾಜರಿದ್ದು ಗೌರವನೀತ್ತರನ್ನು ಸನ್ಮಾನಿಸಿದರು.