ನೆರೆ ಪ್ರದೇಶದಲ್ಲಿ ಮಾಸಿದ ದೀಪಾವಳಿ ಹಬ್ಬ .ಕತ್ತಲ ಮನದೊಳಗೆ ಬರಬಹುದೇ ಬರವಸೆಯ ಬೆಳಕು.




ವಿಶೇಷ ವರದಿ
TOC NEWS KODAGU
 ದೀಪಾವಳಿ ಎಂದರೆ ಬೆಳಕಿನ ಹಬ್ಬ ,
 ಮವಿನ ಎಲೆಗಳು ಚೆಂಡು ಹೂಗಳಿಂದ ಮನೆಯನ್ನು ಸಿಂಗರಿಸಿಕೊಂಡು ಮನೆಮಂದಿಯಲ್ಲ ಹೊಸ ಬಟ್ಟೆ ತೊಟ್ಟು ಸಣ್ಣಸಣ್ಣ ಮಣ್ಣಿನ ಹಣತೆಗಳನ್ನು ಹಚ್ಚಿ ಮನೇಯ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಸಿದರೆ ಅಮ್ಮನಿಗೆ ಹಬ್ಬದ ಸಿಹಿ ತಿಂಡಿ ಅಡುಗೆಮಾಡಿ ಅಕ್ಕಪಕ್ಕದ ಮನೆಯವರೊಂದಿಗೆ ಮನೆಮಂದಿಯಲ್ಲ ಸಂತೋಷದಿಂದ ಹಬ್ಬದ ಊಟವನ್ನು ಸವಿಯುತ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದ ನಮ್ಮ ಗ್ರಾಮದಲ್ಲಿ ಈ ಹಿಂದಿನ ಸಡಗರ ಸಂಭ್ರಮ ಸಂತೋಷವನ್ನು ಕಳೆದ ಆಗಸ್ಟ್ ತಿಂಗಳ ಮಹಾ ಪ್ರವಾಹ ಕಸಿದು ಕೊಂಡಿದೆ. ಈ ಮಹಾ ಪ್ರವಾಹದಲ್ಲಿ ನಮ್ಮ ಗ್ರಾಮದಲ್ಲಿ ಸುಮಾರು 40ಮನೆಗಳು ನೆಲಸಮವಾಗಿ ಸಿದ್ದಾಪುರದ ಮುಸ್ಲಿಂ ಸಮುದಾಯದವರು ಕಟ್ಟಿಕೊಟ್ಟ ತಾತ್ಕಾಲಿಕ ಶೆಡ್ ಗಳಲ್ಲಿ ಮುಂದಿನ ಭವಿಷ್ಯದ ಬಗೆ ಚಿಂತಿಸುತ್ತಾ ಬೆಳಕಿನ ಹಬ್ಬವನ್ನು ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ .ಇತ್ತ ವಾಸಿಸುವ ಮನೆ ,ಮನೆಯ ಸಾಮಗ್ರಿಗಳನ್ನು, ಕಳೆದುಕೊಂಡಿರುವ ಬಡಪಾಯಿಗಳಿಗೆ ಕಳೆದೆರಡು ತಿಂಗಳುಗಳಿಂದ ಕೆಲಸವು ಇಲ್ಲದೆ ಧಾನಿಗಳು ನೀಡಿದ ದಿನಸೀ ವಸ್ತುಗಳಲ್ಲಿ ಜೀವನ ನಡೆಸುವ ಗ್ರಾಮಸ್ಥರು ಹಬ್ಬವೆಲ್ಲಿಂದ ಮಾಡುತ್ತಾರೆ.
ಇತ್ತ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಗೆ ಮೂರು ತಿಂಗಳು ಕಾಲವಕಾಶ ಕೇಳಿದ್ದು ಶಾಶ್ವತ ಪರಿಹಾರ ಸಿಕ್ಕರೆ ಕಳೆದುಕೊಂಡ ಸಡಗರ ಸಂಭ್ರಮ ಮರುಕಳಿಸ ಬಹುದು
 ವ್ಯಾಪಾರಿಗಳಿಗೆ ನಿರಾಸೆ ಮೂಡಿಸಿದ ದೀಪಾವಳಿ 
ದೀಪಾವಳಿ ಹಬ್ಬದಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆ ಯಲ್ಲಿ ಇದ್ದ ವ್ಯಾಪಾರಿಗಳು ಈ ಬಾರಿಯ ಪ್ರಕೃತಿ ವಿಕೋಪ ಅತಿವೃಷ್ಟಿಯಿಂದಾಗಿ ಮಣ್ಣಿನ ಹಣತೆಗಳು ಹಣ್ಣು, ಹೂವೂ ಪೂಜಾ ಸಾಮಗ್ರಿಗಳನ್ನು ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳು ವ್ಯಾಪರವಿಲ್ಲದೆ ಕಂಗಾಲಾಗಿದ್ದಾರೆ.
ಇನ್ನಾದರೂ ಸರ್ಕಾರ ಕೂಡೆಲೇ ಪರ್ಯಾಯ ವ್ಯವಸ್ಥೆಗಳಿಗೆ ಮುಂದಾಗಿ ನೊಂದ ಸಂತ್ರಸ್ತರ ಮನಗಳಲ್ಲಿ ಸಂತೋಷದ ಬೆಳಕನ್ನು ಹಚ್ಚಬೇಕಾಗಿದೆ.

                    ಕೃಷ್ಣ .ಎಂ .ಎ.
                    ಕರಡಿಗೋಡು