ತಾಜುಲ್ ಉಲಮಾ ಉರೂಸ್ ಕರ್ನಾಟಕ ಪ್ರಚಾರ ಸಮೀತಿ ಚಯರ್ಮೆನ್ ಆಗಿ ಎಸ್ ಕೆ ಖಾದರ್ ಹಾಜಿ ಆಯ್ಕೆ

No comments

ಉಳ್ಳಾಲ (TOC ನ್ಯೂಸ್) : ಕನ್ನಡ ಮಣ್ಣಿಗೆ ಕೀರ್ತಿಯ ತಂದ ಕ್ರಾಂತಿಯ ವೀರ, ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿಯವರ ಪಾದಸ್ಪರ್ಷದಿಂದ ಪುಣೀತಗೊಂಡ ಮದನಿ ತಂಙಳ್ ಸನ್ನಿಧಿಯಲ್ಲಿ 65 ವರ್ಷಗಳ ಕಾಲ ಧಾರ್ಮಿಕ ದೀನೀ ಸೇವೆಗೈದ ಉಲಮಾ ನಾಯಕ ಅಹ್ಲ್ ಬೈತಿನ ಕಣ್ಮನಿ ನಮ್ಮೆಲ್ಲರ ಆತ್ಮೀಯ ಆಧ್ಯಾತ್ಮಿಕ ನಾಯಕ ಮರ್ಹೂಂ ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳ್ (ನ ಮ) ರವರ 6 ನೇ ಉರೂಸ್ ಸಮಾರಂಭ ಇದೇ ಬರುವ ನವಂಬರ್ 29,30,ಡಿ 1 ರಂದು ಬಹಳ ವಿಜ್ರಂಭನೆಯಿಂದ ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ನಡೆಯಲಿದ್ದು ಕರ್ನಾಟಕದಿಂದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಎಸ್ಕೆ ಖಾದರ್ ಹಾಜಿ ಮುಡಿಪು, ಕಾರ್ಯದರ್ಶಿಯಾಗಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ಬಾಸ್ ಹಾಜಿ ಮಲಾಝ್ ರವರನ್ನು ಇಂದು ಮಂಜನಾಡಿ ಅಲ್ ಮದೀನಾ ಯತೀಂ ಖಾನ ಸಭಾಂಗಣದಲ್ಲಿ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 99 ಸದಸ್ಯರನ್ನೊಳಗೊಂಡ ಸಮೀತಿಯನ್ನು ಆಯ್ಕೆ ಮಾಡಲಾಯಿತು.

ಅಲ್ ಮದೀನಾ ವ್ಯವಸ್ಥಾಪಕ ಅಬ್ದುಲ್ ಖಾದರ್ ಸಖಾಫಿ ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಮುನೀರ್ ಸಖಾಫಿ ಉಳ್ಳಾಲ, ಸಾಮುಣಿಗೆ ಮುಹಮ್ಮದ್ ಮದನಿ ಹಾಗೂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಆಶಂಶೆ ಭಾಷಣ ಮಾಡಿದರು. ವೇದಿಕೆಯಲ್ಲಿ ಹನೀಫ್ ಹಾಜಿ ಉಳ್ಳಾಲ, ಅಶ್ರಫ್ ಕಿನಾರ, ಕೆಇ ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು,ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ,ಅಬೂಬಕ್ಕರ್ ಮದನಿ ಪರಪ್ಪು, ಪುತ್ತುಬಾವ ಹಾಜಿ ಮುಡಿಪು, ಅಬ್ದುಲ್ ಖಾದರ್ ಸಾಲೆತ್ತೂರು ಖಾಲಿದ್ ಹಾಜಿ ಭಟ್ಕಳ, ಬಶೀರ್ ಮದನಿ ಕೂಳೂರು, ಹಂಝ ಮದನಿ ಮಿತ್ತೂರು,ಸಿದ್ದೀಖ್ ಸಖಾಫಿ ಮೂಳೂರು, ಅಬ್ದುಲ್ ರಝಾಕ್ ಹಾಜಿ ಮಲಾರ್, ಖಾಲಿದ್ ಹಾಜಿ ನ್ಯೂಪಡ್ಪು,ಇಸ್ಮಾಯಿಲ್ ಸಅದಿ ಉರುಮಣೆ, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಮುನೀರ್ ಮಾಸ್ಟರ್ ತಲಕಿ,ಅಬ್ದುಲ್ ರಝಾಕ್ ಮಾಸ್ಟರ್ ನಾವೂರು ಸಮೇತ ಅನೇಕ ಸುನ್ನಿ ಸಂಘ ಸಂಸ್ಥೆಗಳ ರೂವಾರಿಗಳು ಹಾಜರಿದ್ದರು.

 ಪ್ರಾರಂಭದಲ್ಲಿ ಮುನೀರ್ ಸಖಾಫಿ ಸ್ವಾಗತಿಸಿ ಶಿಹಾಬುದ್ದೀನ್ ಸಖಾಫಿ ವಂದಿಸಿದರು ಎಂದು ಪ್ರಚಾರ ಸಮೀತಿ ಚೆಯರ್ಮೇನ್ ಅಶ್ರಫ್ ಕಿನಾರ, ಕನ್ವೀನರ್ ಆರ್ ಕೆ ಮದನಿ ಅಮ್ಮೆಂಬಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

No comments

Post a Comment