ಮಡಿಕೇರಿ ; ವೀರಾಜಪೇಟೆ ತಹಸೀಲ್ದಾರ್ ಪುರಂದರ ಅವರು ತಮ್ಮ ಕಚೇರಿಯಲ್ಲೇ ಶುಕ್ರವಾರ ಲಂಚ ಸ್ವೀಕರಿಸುವಾಗ ಏಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ವೀರಾಜಪೇಟೆ ತಾಲ್ಲೂಕು ತೂಚಮಕೇರಿಯ ನಿವಾಸಿ ಪಿ ಎಂ ನರೇಂದ್ರ ಎಂಬುವವರು ತಮ್ಮ ಜಮೀನನ್ನು ಭೂ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲಸ ಮಾಡಿಕೊಡಲು ಸತಾಯಿಸುತಿದ್ದ ತಹಸೀಲ್ದಾರ್ ಅವರು ಸಿಬ್ಬಂದಿ ಜಾಗೃತ್ ಮೂಲಕ 15 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 9 ಸಾವಿರ ರೂಪಾಯಿ ಕೊಡಲು ನರೇಂದ್ರ ಸಮ್ಮತಿಸಿದ್ದರು. ಇಂದು ಈ ಲಂಚದ ಮೊದಲ ಕಂತಾದ 2000 ರೂಪಾಯಿಗಳನ್ನು ತಮ್ಮ ಕಚೇರಿಯಲ್ಲೇ ಸ್ವೀಕರಿಸುತಿದ್ದಾಗ ಏಸಿಬಿ ಡಿವೈಎಸ್‌ಪಿ ಪೂರ್ಣಚಂದ್ರ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ್ ಧಾಳಿ ನಡೆಸಿ ಬಂಧಿಸಿದ್ದಾರೆ. ಸಿಬ್ಬಂದಿ ಜಾಗೃತ್ ಎಂಬಾತನನ್ನೂ ಬಂಧಿಸಲಾಗಿದ್ದು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಯುತ್ತಿದೆ.
ವಿರಾಜಪೇಟೆ ತಹಶೀಲ್ದಾರ್ ಎಸಿಬಿ ಬಲೆಗೆ

No comments
Post a Comment