ಚೆಟ್ಟಳ್ಳಿ (TOC ನ್ಯೂಸ್): ಹಿಂದೂ ಮಲಯಾಳಿ ಸಮಾಜಂ ಇದರ ಹತ್ತನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮವು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ (13-10-2019 ಭಾನುವಾರ ) ಸರಳ ರೀತಿಯಲ್ಲಿ ನಡೆಯಲಿದೆ ಎಂದು ಮಲಯಾಳಿ ಸಮಾಜದ ಪ್ರಮುಖರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ 7 ರಿಂದ 09 ಗಂಟೆಯವರೆಗೆ ಪೂಕಳಂ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಮಲಯಾಳಿ ಸಮಾಜಂ ಇದರ ಗೌರವಾಧ್ಯಕ್ಷ ವಿ.ಕೆ ವಿನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದೂ ಮಲಯಾಳಿ ಸಮಾಜಂ ಇದರ ಸಲಹೆಗಾರರಾದ ಟಿ.ಆರ್ ವಾಸುದೇವನ್ , ಪಿ.ಕಣ್ಣನ್ , ಓಣಂ ಆಚರಣಾ ಸಮಿತಿ ಅಧ್ಯಕ್ಷ ಓ.ಕೆ ಶ್ರೀನಿವಾಸ್, ಓಣಂ ಆಚರಣಾ ಸಮಿತಿ ಉಪಾಧ್ಯಕ್ಷರಾದ ಸರೋಜಿನಿ ಬಾಲನ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಓಣಂ ಸದ್ಯ (ವಿಶೇಷ ಭೋಜನ ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜಂ ಅಧ್ಯಕ್ಷರಾದ ಪಿ.ಕೆ ಶಶಿಕುಮಾರ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಮಲಯಾಳಿ ಸಮಾಜಂ ಅಧ್ಯಕ್ಷರಾದ ಕೆ.ಎಸ್ ರಮೇಶ್, ಚೆಟ್ಟಳ್ಳಿ ಮಲಯಾಳಿ ಸಮಾಜಂ ಉಪಾಧ್ಯಕ್ಷ ಎನ್. ಚಂದ್ರನ್, ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವತ್ಸಲ ಶ್ರೀಧರನ್, ಹಾಗೂ ಚೆಟ್ಟಳ್ಳಿ ಮಲಯಾಳಿ ಸಮಾಜಂ ಇದರ ಹಿರಿಯ ಸದಸ್ಯ ಸಿ.ಪಿ ದಿವಾಕರನ್ ಪಾಲ್ಗೊಳ್ಳಲಿದ್ದಾರೆ ಎಂದು ಮಲಯಾಳಿ ಸಮಾಜಂ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಲಯಾಳಿ ಸಮಾಜಂ ಇದರ ಸದಸ್ಯರ 10ನೇ ಹಾಗೂ 12ನೇ ತರಗತಿಯಲ್ಲಿ 2017-18, ಮತ್ತು 2018-19ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

No comments
Post a Comment