ಭಾರತದ ಸೆಸ್ಟೋ ಬಾಲ್ ಉಪನಾಯಕ ಸಾಹಿಲ್ ಉಸ್ಮಾನ್ ಹಾಗೂ ನಂದಿನಿ ಗೆ ಕುಶಾಲನಗರದಲ್ಲಿ ಭವ್ಯ ಸ್ವಾಗತ

No comments
ಕುಶಾಲನಗರ,: ಭಾರತದ ಸೆಸ್ಟೋ ಬಾಲ್ ನ ಉಪನಾಯಕ ಸಾಹಿಲ್ ಉಸ್ಮಾನ್ ಹಾಗೂ ಸೆಸ್ಟೋಬಾಲ್ ಆಟಗಾರ್ತಿ ನಂದಿನಿಯವರಿಗೆ ಕುಶಾಲನಗರದಲ್ಲಿ ಸ್ಥಳೀಯರು ಭವ್ಯ ಸ್ವಾಗತವನ್ನು ನೀಡಿದರು. ಥಾಯ್ಕೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಅಂತರಾಷ್ಟ್ರೀಯ ಸೆಸ್ಟೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ಕೊಡಗಿನ ಸಾಹಿಲ್ ಉಸ್ಮಾನ್ ಹಾಗೂ ನಂದಿನಿ ಭಾಗವಹಿಸಿದ್ದರು. ಎಂಟು‌ ರಾಷ್ಟ್ರಗಳ ಪೈಕಿ, ಭಾರತ ದೇಶ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.‌ ಥಾಯ್ಲೆಂಟ್ ನಿಂದ‌ ಭಾರತಕ್ಕೆ ಮರಳಿದ, ಕೊಡಗಿನ ಕ್ರೀಡಾ ಪಟುಗಳನ್ನು ಕುಶಾಲನಗರದಲ್ಲಿ ಸ್ಥಳೀಯ ಜನತೆ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಮಾತನಾಡಿದ ಸಾಹಿಲ್ ಉಸ್ಮಾನ್ ಹಾಗೂ ನಂದಿನಿ, ಸೆಸ್ಟೋ ಬಾಲ್ ನಲ್ಲಿ ಕೊಡಗಿನವರಾಗಿ ಭಾರತವನ್ನು ಪ್ರತಿನಿಧಿಸಿದಕ್ಕಾಗಿ ಹೆಮ್ಮೆಯಾಗುತ್ತಿದೆ. ಸ್ಥಳೀಯರು ಭವ್ಯ ಸ್ವಾಗತವನ್ನು ನೀಡಿ ಗೌರವಿಸಿದ್ದಾರೆ. ಬಹಳ ಸಂತೋಷವಾಗುತ್ತಿದೆ ಎಂದ ಅವರು, ಸ್ಥಳೀಯರಿಗೆ ಧನ್ಯವಾದವನ್ನು ತಿಳಿಸಿದರು. ಸಾಹಿಲ್‌ ಉಸ್ಮಾನ್ ಹಾಗೂ ನಂದಿನಿಯವರಿಗೆ ಸ್ಥಳೀಯರು ಹೂಗುಚ್ಚ, ಹೂವಿನ ಹಾರ ಹಾಗೂ ಶಾಲನ್ನು ಹೊದಿಸಿ ಗೌರವಿಸಿದರು. ನಂತರ ಇವರ ಹೆಮ್ಮೆಯ ಕಾರ್ಯವನ್ನು ಸ್ಥಳೀಯರು ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಶುಂಠಿಕೊಪ್ಪದ ಉಸ್ಮಾನ್ ಅವರ ಪುತ್ರ ಸಾಹಿಲ್ ಕರ್ನಾಟಕದ ಸೆಸ್ಟೋ ಬಾಲ್ ನಾಯಕ‌ ಹಾಗೂ ಭಾರತದ ಉಪನಾಯಕನಾಗಿದ್ದಾರೆ. ಚಟ್ಟಳ್ಳಿಯ ವಾಸು ಮತ್ತು ಪುಷ್ಪ ದಂಪತಿಗಳ ಪುತ್ರಿ ನಂದಿನಿಯವರು ಮಹಿಳಾ‌‌ ವಿಭಾಗದ ಸೆಸ್ಟೋ ಬಾಲ್ ಆಟಗಾರ್ತಿಯಾಗಿ ಭಾಗವಹಿಸಿದ್ದರು. ಕೊಡಗಿನ ಇಬ್ಬರು ಆಟಗಾರರು ಸೆಸ್ಟೋ ಬಾಲ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಕ್ರೀಡಾ ತವರೂರಾದ ಕೊಡಗಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

No comments

Post a Comment