ಸಿದ್ದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಬಂಧ, ಗೀತಾ ಗಾಯನ ಸ್ಪರ್ಧೆ

No comments
ಸಿದ್ದಾಪುರ:-ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇಕ್ರಾ ಪಬ್ಲಿಕ್ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿಅಮ್ಮತ್ತಿ ಹೋಬಳಿ ಹಂತದ ಪ್ರೌಡಶಾಲಾ ವಿಧ್ಯಾರ್ಥಿಗಳಿಗೆಗೀತಾ ಗಾಯನ ಮತ್ತು ಪ್ರಬಂಧ ಸ್ಪರ್ಧೆ ಸಿದ್ದಾಪುರ  ಇಕ್ರಾ ಶಾಲೆಯ ಸಭಾಂಗಣದಲ್ಲಿ ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ. ಪಿ ಕೇಶವ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡದ ಜಾಗೃತಿ ಮೂಡಿಸಲಾಗುತ್ತಿದ್ದು ಕನ್ನಡ ನಾಡು ನುಡಿ ಕಲೆ ಸಂಸ್ಕೃತಿಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದ ಅವರು ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು ಗ್ರಂಥಾಲಯದ ಓದುವ ಜ್ಞಾನ ಬೆಳೆಸಿಕೊಳ್ಳಬೇಕೆಂದರು. ಶಾಲೆಯಲ್ಲಿ ಗೀತಾ ಗಾಯನ, ಪ್ರಬಂಧ ಸ್ಪರ್ಧೆ, ಹಾಡುಗಾರಿಕೆಯಲ್ಲಿ ಅಮ್ಮತ್ತಿ ಹೋಬಳಿ ಮಟ್ಟದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ  ಶಾಲಾ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.ಕನ್ನಡ ಸಾಹಿತ್ಯ ಪರಿಷತ್ ಅಮ್ಮತಿ ಹೋಬಳಿ ಘಟಕ ಅಧ್ಯಕ್ಷ ಟಿ.ಎಚ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷ ತುಳಸಿ ಗಣಪತಿ,ಆಗಸ್ತೇಶ್ವರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ವೆಂಕಟೇಶ್, ಇಕ್ರಾ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಕೆ.ಯು ಅಬ್ದುಲ್ ರಜಾಕ್, ಇಕ್ರಾಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಯು ಅಬ್ದುಲ್ ಮಜಿದ್, ಗ್ರಾಮ ಪಂಚಾಯಿತಿ ಸದಸ್ಯ ಶಾಹಿನುಲ್ಲಾ, ವಿರಾಜಪೇಟೆ ಜನಪದ ಪರಿಷತ್ ಅಧ್ಯಕ್ಷ    ಟೋಮಿ ಥೋಮಸ್, ಪ್ರಮುಖರಾದ ಮೂಸ,ದರ್ಶನ್,ಬಾವ ಮಾಲ್ದಾರೆ ಸೇರಿದಂತೆ   ಮತ್ತಿತರರು ಉಪಸ್ಥಿತರಿದ್ದರು .

No comments

Post a Comment