ಮಡಿಕೇರಿ ನಗರ ವ್ಯಾಪ್ತಿಯ ಜಾಹೀರಾತು ಫಲಕಗಳ ಶುಲ್ಕ ಪಾವತಿಗೆ ನಗರಸಭೆ ಸೂಚನೆ

No comments

 


ಮಡಿಕೇರಿ :-ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬರುವ ಸ್ವತ್ತಿನ ಆಸ್ತಿ ತೆರಿಗೆ, ನೀರಿನ ತೆರಿಗೆ, ನಗರಸಭೆ ಮಳಿಗೆಗಳ ಮಾಸಿಕ ಬಾಡಿಗೆ, ಜಾಹಿರಾತು ಫಲಕದ ಶುಲ್ಕಗಳನ್ನು ಪಾವತಿಸದೆ ಬಾಕಿ ಇಟ್ಟುಕೊಂಡಿರುವವರು ಹಿಂದಿನ ಬಾಕಿ ಸೇರಿದಂತೆ ಕೂಡಲೇ ನಗರಸಭೆಗೆ ಬಂದು ಆನ್ಲೈನ್ ಚಲನ್ ಪಡೆದು ಪಾವತಿಸಿ ಸ್ವೀಕೃತಿ ಪಡೆಯುವುದು. ತಪ್ಪಿದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರಲ್ಲಿ ದತ್ತವಾದ ಅಧಿಕಾರದಂತೆ ಇದನ್ನೇ ಅಂತಿಮ ಸೂಚನೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ನೀರಿನ ತೆರಿಗೆ ಚಾಲ್ತಿ ವರ್ಷದ ಬಾಕಿ ಇದ್ದರು ಪಾವತಿ ಮಾಡದೆ ಇದ್ದಲ್ಲಿ ಯಾವುದೇ ಸೂಚನೆ ನೀಡದೆಯೇ ನಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು.
ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಇಟ್ಟುಕೊಂಡಲ್ಲಿ ಮುನ್ಸಿಪಲ್ ಕಾಯಿದೆ ಕಲಂ 142(3) ರಂತೆ ಕ್ರಮ ಇಡಲಾಗುವುದು. ಮಳಿಗೆ ಬಾಡಿಗೆ ಬಾಕಿ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಮಳಿಗೆ ಮುಚ್ಚಲು ಕ್ರಮ ವಹಿಸಲಾಗುವುದು. ಜಾಹಿರಾತು ಫಲಕಗಳ ಶುಲ್ಕ ಪಾವತಿ ಮಾಡದೇ ಇದ್ದಲ್ಲಿ ತೆರವುಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ತಿಳಿಸಿದ್ದಾರೆ.

No comments

Post a Comment