ನಗರದ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹ

No comments

ಮಡಿಕೇರಿ -ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹವು ಸೋಮವಾರ ನಗರದ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆಯಿತು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಇಂದಿನ ದಿನಗಳಲ್ಲಿ ಅಪೌಷ್ಠಿಕತೆಗೆ ಮೂಲ ಕಾರಣ ಪ್ರಸ್ತುತ ಜೀವನ ಶೈಲಿ ಮತ್ತು ಆಹಾರ ಕ್ರಮಗಳು ಎಂದರು.  

ಹಿಂದಿನ ಕಾಲದಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದ್ದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಾಗಲಿ, ಅಪೌಷ್ಠಿಕತೆಯಾಗಲೀ ನಮ್ಮ ತಲೆಮಾರಿನಲ್ಲಿ ಕಡಿಮೆ ಇತ್ತು, ಆದರೆ ಇಂದಿನ ಬದಲಾದ ಜೀವನ ಶೈಲಿ ಆಹಾರ ಕ್ರಮ ಹಾಗೂ ರಾಸಾಯನಿಕಗಳ ಬಳಕೆಯಿಂದ ಈ ತಲೆಮಾರಿನ ಎಲ್ಲರಿಗೂ ಅಪೌಷ್ಠಿಕತೆ ಕಾಡುತ್ತಿದೆ ಎಂದರು. 

ತಾಯಂದಿರು ಮಗುವಿಗೆ ಜನ್ಮ ನೀಡಿದಾಗ ಸ್ತನಪಾನ ಮಾಡುವುದು ಅತೀ ಅಗತ್ಯವಾಗಿದ್ದು, ಇದರಿಂದ ಅನೇಕ ರೀತಿಯ ಅಪೌಷ್ಠಿಕೆಯಿಂದ ಮಗುವು ಮುಕ್ತವಾಗುತ್ತದೆ ಎಂದು ಹೇಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಇದರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರವಿಂದ ಬಾಬು ಅವರು ಮಾತನಾಡಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹವು ಒಂದು ಅರಿವು ಕಾರ್ಯಕ್ರಮವಾಗಿದ್ದು, ಇದರ ಅಂಗವಾಗಿ ಹಲವಾರು ಯೋಜನೆಗಳಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸುವ ಸಲುವಾಗಿ ಧನ ಸಹಾಯ ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. 

ಮಕ್ಕಳ ಅಭಿವೃದ್ಧಿ ಅಧಿಕಾರಿ ಅರುಂಧತಿ ಅವರು ಕೊಡಗಿನಲ್ಲಿ ಪ್ರಕೃತಿಯು ಸಮೃದ್ಧವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಇತರೇ ಆಹಾರ ಕ್ರಮವನ್ನು ಜನರು ರೂಢಿಸಿಕೊಳ್ಳಬೇಕು ಎಂದರು. 

ಉಳಿದಂತೆ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಸೀತಾಲಕ್ಷ್ಮಿ, ಮಡಿಕೇರಿ ನಗರದ ಕೌನ್ಸಿಲರ್ ಶಾರದ, ನಾಗರಾಜ್, ಮೇಲ್ವಿಚಾರಕರಾದ ಶೀಲಾ ಮತ್ತು ಸವಿತಾ ಅವರು ಹಾಜರಿದ್ದರು. ಸವಿತಾ ಅವರು ನಿರೂಪಿಸಿದರು.

No comments

Post a Comment