ಜೀವನದಲ್ಲಿ ಜಿಗುಪ್ಸೆ - ಯುವಕ ಅತ್ಮಹತ್ಯೆ : ಕೊಡ್ಲಿಪೇಟೆ ಸಮೀಪ ಕ್ಯಾತೆ ಗ್ರಾಮದಲ್ಲಿ ಘಟನೆ

No comments

 ಕೊಡ್ಲಿಪೇಟೆ (Times Of Coorg) : ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದ ಕ್ರಷ್ಣಪ್ಪ ರವರ ಮಗ ಚಂದನ್ (22) ಅತ್ಮಹತ್ಯೆ ಮಾಡಿಕೊಂಡ ಯುವಕ, ಇವತ್ತು ಮಧ್ಯಾಹ್ನ ಮನೆಯ ಒಳಗೆ ಮೆಲ್ಚಾವಣಿಗೆ ಹಗ್ಗ ಹಾಕಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

 ಚಂದನ್ ಕೂಲಿ ಕೆಲಸ ಮಾಡಿಕೊಂಡಿದ್ದು ತನ್ನ ತಂದೆ ಕೃಷ್ಣಪ್ಪನವರೊಂದಿಗೆ ವಾಸವಿದ್ದ, ಪ್ರತಿನಿತ್ಯ ಮದ್ಯದ ಅಮಲಿನಲ್ಲಿ ಮನೆಯ ಸಾಮಾಗ್ರಿಗಳನ್ನು ಒಡೆದು ಹಾಕುತ್ತಿದ್ದ. ಇಂದು ಬೆಳಿಗ್ಗೆ ಕುಡಿದ ಮತ್ತಿನಲ್ಲಿ ಹಾರೆಯಿಂದ ಮನೆಯ ಟೈಲ್ಸನ್ನು ಒಡೆದು ಹಾಕುತ್ತಿದ್ದ ಸಂದರ್ಭ ತಂದೆ ಸುಮ್ಮನಿರುವಂತೆ ಹೇಳಿದ್ದಾರೆ. ಕೃಷ್ಣಪ್ಪನವರು ಕೊಡ್ಲಿಪೇಟೆ ಪಟ್ಟಣಕ್ಕೆ ಹೋಗಿ ಬಂದ ಸಂದರ್ಭ ಮಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಶನಿವಾರಸಂತೆ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೊತ್ತರ ಪರಿಕ್ಷೆ ನಡೆಯಿತು, ಮೃತ ಯುವಕ ಅತಿಯಾದ ಮದ್ಯವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ.  ಜೀವನದಲ್ಲಿ ಜಿಗುಪ್ಸೆ ಗೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಯುವಕನ ತಂದೆ ಶನಿವಾರಸಂತೆ ಠಾಣೆಯಲ್ಲಿ ದೂರು ನೀಡಿದ್ದು

ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶನಿವಾರಸಂತೆ ಇನ್ಸ್ಪೆಕ್ಟರ್ ಎಸ್ ಪರಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No comments

Post a Comment