ನಾಪೋಕ್ಲು (Times Of Coorg) : ಸ್ಥಳಿಯ ಸಂತೆ ಮಾರುಕಟ್ಟೆ ಬಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸಂಗ್ರಹವಾದ ತ್ಯಾಜ್ಯವನ್ನು ಸುರಿಯುತ್ತಿದ್ದು ಇಲ್ಲಿ ಕಸದ ರಾಶಿಯೇ ಸಂಗ್ರಹವಾಗಿ ಕೊಳೆತು ದುರ್ವಾಸನೆ ಬೀರುತ್ತಿದ್ದು ಕೊರೋನಾದ ನಡುವೆ ಮಾರಕ ರೋಗಗಳನ್ನು ಆಹ್ವಾನಿಸುತ್ತಿದೆ. ಅಲ್ಲದೆ ನಾಪೋಕ್ಲು ಪಟ್ಟಣ ಸೇರಿದಂತೆ ಗ್ರಾಮಗಳ ಕಸಗಳನ್ನು ವಿಲೇವಾರಿ ಮಾಡಿ ಮಾರುಕಟ್ಟೆ ಬಳಿಯಲ್ಲಿಯೇ ಸುರಿಯುತ್ತಿರುವುದರಿಂದ ದುರ್ವಾಸನೆ ಬಂದು ಸಾರ್ವಜನಿಕರು ಸಂತೆ ದಿವಸ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುವಂತಾಗಿದೆ. ಆದ್ದರಿಂದ ಕೊಳೆತ ತ್ಯಾಜ್ಯವನ್ನು ಕೂಡಲೇ ಬೇರೆಡೆಗೆ ಸಾಗಿಸಲು ಗ್ರಾಮ ಪಂಚಾಯಿತಿಯವರು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
:ಕ್ರಮ ಕೈಗೊಳ್ಳದ ಗ್ರಾ.ಪಂ. ವಿರುದ್ಧ ಸ್ಥಳೀಯರ ಅಸಮಾಧಾನ
ಪಟ್ಟಣದಲ್ಲಿ ಸಂಗ್ರಹಣೆ ಮಾಡಿದ ತ್ಯಾಜ್ಯವನ್ನು ಮಾರುಕಟ್ಟೆಯಲ್ಲಿ ಸುರಿಯುತ್ತಿರುವುದು ಸರಿಯಲ್ಲ ಇದರಿಂದ ಇಲ್ಲಿ ಕಸದ ದೊಡ್ಡ ರಾಶಿಯೇ ಶಾಂಗ್ರಹವಾಗಿ ಕೊಳೆತು ದುರ್ವಾಸನೆ ಬೀರುತ್ತಿದ್ದು ಇದರಿಂದ ಮಾರಕ ರೋಗಕ್ಕೆ ಆಹ್ವಾನ ನೀಡಿದಂತೆ ಆಗುತ್ತಿದೆ. ಕೂಡಲೇ ಇದನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯವನ್ನು ಕಾಪಾಡಬೇಕಾಗಿದೆ ಎಂದು ಬೇತು ಗ್ರಾಮದ ಚೋಕಿರ ಸಜಿತ್ ರವರು ಒತ್ತಾಯಿಸಿದ್ದಾರೆ.
:ಅಶುಚಿತ್ವ ದುರ್ವಾಸನೆ ನಡುವೆಯೇ ವ್ಯಾಪಾರ
ಅದರಂತೆ ತರಕಾರಿ ವ್ಯಾಪಾರಿ ಗಣೇಶ್ ಮಾತನಾಡಿ ನಮಗೆ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಲು ಕಷ್ಟ ವಾಗಿದೆ. ಇಲ್ಲಿ ಸುರಿದಿರುವ ಕಸದ ರಾಶಿಯಿಂದ ದುರ್ವಾಸನೆ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಸಾಮಾನು ಖರೀದಿಸಲು ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ.ನಾವು ಹೇಗೆ ವ್ಯಾಪಾರ ಮಾಡುವುದು ತಿಳಿಯುತ್ತಿಲ್ಲ ಆದರಿಂದ ಸಂಬಂಧಪಟ್ಟವರು ಕೂಡಲೇ ಇಲ್ಲಿಂದ ಕಸವನ್ನು ತೆಗೆದು ಶುಚಿಗೊಳಿಸಿ ನಮಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.







No comments
Post a Comment