ಮಡಿಕೇರಿ ಆ.05(Times Of Coorg):-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ‘ಕೊಡವರ ಶೌರ್ಯ ಮತ್ತು ಸಾಹಸ ಬಿಂಬಿಸುವ’ ನೃತ್ಯದ ಪ್ರಕಾರಗಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರ ವಿವರ ಪ್ರಕಟಿಸಲಾಗಿದೆ.
ಪ್ರಥಮ ವಿಭಾಗದಲ್ಲಿ (5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ) ಕಂಬೀರಂಡ ಹನ ಅಪ್ಪಯ್ಯ (ಪ್ರಥಮ), ಮಿಥಿಲ ಟಿ.ಎಂ (ದ್ವಿತೀಯ), ಕೊಂಡ್ಯೋಳಂಡ ತಾನಿಶ್ ತಿಮ್ಮಯ್ಯ (ತೃತೀಯ), ನಿಹಾರಿಕ.ಎ, ವೀಕ್ಷಾ ಪೊನ್ನಮ್ಮ.ಐ.ಹೆಚ್, ಯಾನಿಕ ಬೊಳ್ಳಮ್ಮ.ಸಿ.ಟಿ (ಸಮದಾನಕರ ಬಹುಮಾನಕ್ಕೆ) ಪಾತ್ರರಾಗಿದ್ದಾರೆ.
ದ್ವಿತೀಯ ವಿಭಾಗದಲ್ಲಿ (ಪಿ.ಯು.ಸಿ ಯಿಂದ ಸ್ನಾತಕೋತ್ತರ ಪದವಿ) ಕುಮ್ಮಂಡ ರೋಶಿಕ ಚೋಂದಮ್ಮ (ಪ್ರಥಮ), ತಾನ್ಯ ಅಪ್ಪಯ್ಯ ಚೆರುವಾಲಂಡ (ದ್ವಿತೀಯ), ಪಾಲಂದಿರ ಯಶ್ವಿ ಕಾವೇರಪ್ಪ (ತೃತೀಯ), ಭುವನ್ ಗಣಪತಿ ಕೋಲೇರ, ಇಂದಂಡ ಸುಹಾನ ಚೆಂಗಪ್ಪ, ರಿಕಿತ್ ಪಾಟಿಲ್ (ಸಮದಾನಕರ ಬಹುಮಾನ) ಪಡೆದಿದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

No comments
Post a Comment