ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ : ಸರ್ಕಾರದಿಂದ ಆದೇಶ

No comments

 ಮಡಿಕೇರಿ ಆ.06(Times Of Coorg):-2020-2021 ನೇ ಸಾಲಿನಲ್ಲಿ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗಿದ್ದ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲ ಯೋಜನೆಯಡಿ ಸರ್ಕಾರವು ಹೊರಡಿಸಿರುವ ಷರತ್ತುಗಳನ್ನು ಸಡಿಲಿಸಿ ಪರಿಷ್ಕøತ ಆದೇಶವನ್ನು ಹೊರಡಿಸಿದ್ದು, ವಿವರ ಇಂತಿದೆ. 

         2020-2021 ನೇ ಸಾಲಿಗೆ  ಸಹಕಾರ ಸಂಸ್ಥೆಗಳು ಕ್ರಮವಾಗಿ ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ ರೈತರಿಗೆ ರೂ.3 ಲಕ್ಷಗಳವರೆಗೆ ಅಲ್ಪಾವಧಿ ಬೆಳೆ ಸಾಲ ಯೋಜನೆ ಮತ್ತು ಶೇ.3 ರ ಬಡ್ಡಿ ದರ ಅನ್ವಯವಾಗುವಂತೆ ರೂ.10 ಲಕ್ಷಗಳ ವರೆಗೆ ಮಧ್ಯಮಾವಧಿ, ದೀರ್ಘಾವಧಿ ಕೃಷಿ, ಕೃಷಿ ಸಂಬಂಧಿತ ಸಾಲ ವಿತರಿಸುವ ಯೋಜನೆಗಳನ್ನು ಕೆಲವೊಂದು ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿತ್ತು.

          ಅದರಂತೆ ಈ ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಠ ರೂ.3 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲ ಹಾಗೂ ರೂ.10 ಲಕ್ಷಗಳವರೆಗಿನ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ನೀಡುವಂತೆಯೂ, ಸರ್ಕಾರಿ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ನೌಕರನಾಗಿದ್ದು, ಮಾಸಿಕ ರೂ.20 ಸಾವಿರ ವೇತನ ಅಥವಾ ಪಿಂಚಣಿದಾರರು ಹಾಗೂ ಆದಾಯ ತೆರಿಗೆ ಪಾವತಿದಾರರು ಯೋಜನೆಗೆ ಒಳಪಡುವುದಿಲ್ಲವೆಂದು ಹಾಗೂ ಮಧ್ಯಮಾವದಿ/ಧೀರ್ಘಾವಧಿ ಕೃಷಿ ಸಾಲಕ್ಕೆ ಸಂಬಂಧಿಸಿದಂತೆ 2004 ರಿಂದ ತಹಲ್‍ವರೆಗಿನ ಅವಧಿಯಲ್ಲಿ ರಿಯಾಯಿತಿ ಬಡ್ಡಿ ದರದಡಿ ಸಾಲ ಪಡೆದ ಬಾಪ್ತು ಈಗಾಗಲೇ ರೂ.4 ಲಕ್ಷಗಳ ಬಡ್ಡಿ ರಿಯಾಯಿತಿಯನ್ನು ಪಡೆದಿದ್ದಲ್ಲಿ ಅಂತಹ ರೈತರಿಗೆ ಯೋಜನೆಯ ಪ್ರಯೋಜನ ದೊರೆಯದೆಂದು ಷರತ್ತುಗಳನ್ನು ವಿಧಿಸಿದೆ. 

       ಈ ಆದೇಶದಲ್ಲಿನ ಷರತ್ತುಗಳ ಹಿನ್ನಲೆಯಲ್ಲಿ, ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲವನ್ನು ಪಡೆಯುತ್ತಿರುವ ಜಿಲ್ಲೆಯ ರೈತರಿಗೆ ಅನಾನುಕೂಲವಾಗಲಿದೆ. ಹೊರಡಿಸಲಾಗಿರುವ ಆದೇಶದಲ್ಲಿನ ಷರತ್ತುಗಳನ್ನು ಕೈಬಿಡುವಂತೆ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ ಗಣಪತಿ ಅವರು ರಾಜ್ಯದ ಸಹಕಾರ ಸಚಿವರಿಗೆ, ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ, ಸಹಕಾರ ಇಲಾಖಾ ಅಧಿಕಾರಿಗಳಿಗೆ ಮನವಿ ಪತ್ರಗಳ ಮೂಲಕ ಮನವಿ ಮಾಡಿದ್ದಾರೆ. ಹಾಗೂ ಈ ಹಿಂದೆ ಮುಖ್ಯಮಂತ್ರಿ ಅವರು ಹಾಗೂ ಸಹಕಾರ ಸಚಿವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಖುದ್ದು ಬೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಹಕಾರ ಸಚಿವರು ಜಿಲ್ಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಖುದ್ದು ಮನವಿ ಪತ್ರ ಸಲ್ಲಿಸಿದ್ದರು.  

       ಮುಂದುವರೆದು, ಮಾರ್ಚ್ 2021ರ ಮಾಹೆಯಲ್ಲಿ ವಿಧಾನಸೌಧದಲ್ಲಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಮತ್ತು ರಾಜ್ಯದ ಎಲ್ಲಾ ಡಿ.ಸಿ.ಸಿ. ಬ್ಯಾಂಕುಗಳ ಅಧ್ಯಕ್ಷರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರು ಸರ್ಕಾರಿ ಆದೇಶದಲ್ಲಿನ ಷರತ್ತುಗಳ ಬಗ್ಗೆ ದ್ವನಿಎತ್ತಿ ಸುದೀರ್ಘವಾಗಿ ಚರ್ಚಿಸಿ ಹೊರಡಿಸಲಾಗಿರುವ ಸುತ್ತೋಲೆಯು ರೈತರಿಗೆ ಮಾರಕವಾಗಿರುವುದಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಈಗಾಗಲೇ ಹೊರಡಿಸಲಾಗಿರುವ ಸರ್ಕಾರಿ ಷರತ್ತುಗಳನ್ನು ಕೈಬಿಡದಿದ್ದಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿರುವ ರೈತರಿಗೆ ತೊಂದರೆಯಾಗುವುದೆಂದು ಸರ್ಕಾರದ ಗಮನವನ್ನು ಸೆಳೆದ ಹಿನ್ನೆಲೆಯಲ್ಲಿ ಸರ್ಕಾರವು ದಿನಾಂಕ 05.09.2020 ಮತ್ತು 07.10.2020 ರಂದು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿನ ಷರತ್ತುಗಳನ್ನು ಸಂಪೂರ್ಣ ಕೈಬಿಟ್ಟು ಪರಿಷ್ಕøತ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲೆಯ ರೈತರಿಗೆ ತಿಳಿಸಬಯಸುತ್ತೇವೆ.

 ನಮ್ಮ ಅಹವಾಲುಗಳಿಗೆ ಓಗೊಟ್ಟು ಸರ್ಕಾರಿ ಆದೇಶವನ್ನು ಪರಿಷ್ಕರಿಸಿರುವ ಹಿಂದಿನ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ, ವಿಧಾನಸಭೆಯ ಸದಸ್ಯರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಹಾಗೂ ಸುನಿಲ್ ಸುಬ್ರಮಣಿ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

No comments

Post a Comment