ಪತ್ರಕರ್ತ ಕುಶಾಲನಗರದ ಎಚ್ ಎಂ ರಘು ಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ

No comments
ಕುಶಾಲನಗರದ ಸಂಗಮ ಟಿವಿ ಪ್ರಧಾನ ಸಂಪಾದಕ  ಹಾಗೂ ಹಿರಿಯ ಪತ್ರಕರ್ತ ಎಚ್.ಎಂ ರಘುವಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 
 ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲಾ ಘಟಕ. ಕರ್ನಾಟಕ
ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಇವರ ಸಹಯೋಗದಲ್ಲಿ  ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 46ಮಂದಿ ಸಾಧಕರ ಪೈಕಿ ಕುಶಾಲನಗರದ  ಎಚ್ ಎಂ ರಘು ಅವರ  ಸೇವಾ ಸಾಧನೆಯನ್ನು ಪರಿಗಣಿಸಿ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
 ಸಮಾರಂಭದಲ್ಲಿ  ಐ ಅಂಡ್ ಯೂಬಿಯಿಂಗ್  ಟುಗೆದರ್  ಪೌಂಡೇಶನ ಶ್ರೀ ಪ್ರಸಾದ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ,
ಕರ್ನಾಟಕ ಪ್ರೆಸ್ ಕೌನ್ಸಿಲ್ ಅಧ್ಯಕ್ಷ ಟಿ .ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು ,
ಕನ್ನಡದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಸುಧಾರಾಣಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಸೇವಾ ರತ್ನ ಗೌರವ ಪ್ರಶಸ್ತಿಗೆ ಭಾಜನರಾದ ಸೇವಾ  ಸಾಧಕರಿಗೆ ಶುಭಕೋರಿದರು. 
 ಮುಖ್ಯ ಅತಿಥಿಗಳಾಗಿ  ಪ್ರಮುಖರಾದ ವೆಂಕಟೇಶ , ಶಶಿಧರ್ ,ಆಲಾಡಿ, ಅಂತೋನಿ, ಜೋಸೆಫ್ , ಮಣಿಮೋಹನ್,  ಮಾಯಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು . ಕುಶಾಲನಗರ ಸಂಗಮ ವಾಹಿನಿಯ ಪ್ರಧಾನ ಸಂಪಾದಕರಾಗಿವ ಎಚ್.ಎಂ. ರಘು ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಾಧನೆ ಪರಗಣಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.  


No comments

Post a Comment