ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗಲು ಕೆಎಂಸಿಸಿ ವತಿಯಿಂದ ಹೋಮ್ ಕೇರ್ ಆರಂಭ
ವಿರಾಜಪೇಟೆ :ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿಪಾಲಿಯೇಟಿವ್ ಆರೈಕೆ ಜಾಗೃತಿ ತರಬೇತಿ ಕಾರ್ಯಕ್ರಮ .ವಿರಾಜಪೇಟೆ ಮೀನುಪೇಟೆ ಮಸ್ಜಿದುನ್ನೂರು ಸಭಾಂಗಣದಲ್ಲಿ ನಡೆಯಿತು.ಬೆಂಗಳೂರು ಕೆಎಂಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನೌಷಾದ್ ಪಾಲಿಯೇಟಿವ್ ಆರೈಕೆ ಜಾಗೃತಿ ಶಿಬಿರ ಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯದಲ್ಲಿ ಕೆಎಂಸಿಸಿ ಸಂಘಟನೆ ಜನಪರ ಕಾಳಜಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಜಾತಿ ಮತ ಭೇದವಿಲ್ಲದೆ ಆರೋಗ್ಯ ಕಾಲೇಜಿಗೆ ಹೆಚ್ಚು ಸಹಕಾರ ನೀಡುತ್ತಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಸಂಕಷ್ಟದಲ್ಲಿರುವವರ ಕುಟುಂಬಗಳಿಗೆ ನೆರವಾಗಲು ಹಲವಾರು ಸಮಾಜಸೇವೆಯನ್ನು ಮಾಡುತ್ತಾ ಬರುತ್ತಿದೆ.ಕೊಡಗು ಜಿಲ್ಲೆಯಲ್ಲಿ ಸಂಘಟನೆ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ. ಪ್ರಕೃತಿ ವಿಕೋಪ ಹಾಗೂ ಪ್ರವಾಹ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಿಟ್ಗಳನ್ನು ವಿತರಿಸಿ ಈಗಾಗಲೇ 2ಬಡ ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬುವ ಮೂಲಕ ಮನೆ ಮನೆಗಳಿಗೆ ತೆರಳಿ ಔಷಧೋಪಚಾರ ಹಾಗೂ ಆರೈಕೆ ಸೇವೆ ಮಾಡಲು ಸಂಘಟನೆ ಮುಂದಾಗಿದ್ದುಸದ್ಯದಲ್ಲಿಯೇ ಕೊಡಗು ಜಿಲ್ಲೆಯಲ್ಲಿ ಹೋಮ್ ಕೇರ್ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.ಸಂಶುಲ್ ಉಲಮಾ ಎಜುಕೇಶನಲ್ ಅಕಾಡಮಿ ಅಧ್ಯಕ್ಷ ಸಿ. ಪಿ. ಎಂ ಬಶೀರ್ ಹಾಜಿ ಮಾತನಾಡಿ ಜನಪರ ಸೇವೆಯೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆಎಂಸಿಸಿ ಸಂಘಟನೆಯ ಆರೋಗ್ಯ ಕಾಳಜಿ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೇಕಾದ ಔಷಧ, ಚಿಕಿತ್ಸೆ,ಸಲಕರಣೆಗಳನ್ನು ನೀಡಿ ಆರೈಕೆ ಸೇವೆ ಮಾಡಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು. ಕೆಎಂಸಿಸಿ ಜಿಲ್ಲಾ ಸಂಘಟನೆಯ ಅಧ್ಯಕ್ಷ ಸಿ.ಎಚ್ ರಫೀಕ್ ಅಧ್ಯಕ್ಷತೆವಹಿಸಿ ಮಾತನಾಡಿ ಕೆಎಂಸಿಸಿ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆ ನೊಂದವರಿಗೆ ನೆರವಾಗುತ್ತಿದೆ.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಹಾಗೂ ಔಷಧ ವೆಚ್ಚವನ್ನು ನೀಡಲಾಗಿದ್ದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.ಸಂಘಟನೆಯ ಮೂಲಕ ಜಿಲ್ಲೆಯಾದ್ಯಂತ ಆರೋಗ್ಯ ಸೇವೆಗೆ ಹೋಮ್ ಕೇರ್ ಸೇವೆ ಪ್ರಾರಂಭಿಸಲಾಗುತ್ತಿದ್ದು ದಾನಿಗಳು ಸಂಘಟನೆಯೊಂದಿಗೆ ಕೈ ಜೋಡಿಸಬೇಕೆಂದರು. ಈ ಸಂದರ್ಭ ಕೆ. ಪಿ ಅಬೂಬಕರ್ ಮುಸ್ಲಿಯಾರ್, ವೈದ್ಯರುಗಳಾದ ಅಮೀರ್ ಅಲಿ, ಪ್ರಿನ್ಸ್, ಜುಬೇರ್,ನೆಲ್ಯಹುದಿಕೇರಿ ಶಂಶುದ್ದೀನ್, ಚಾಮಿಯಾಲ ಅಲ್ತಾಫ್, ಕುಶಾಲನಗರ ಅಬ್ದುಲ್ಲಾ, ಕೊಂಡಂಗೇರಿ ಆರಿಫ್, ಕಲ್ಲುಬಾಣೆ ಜಂಶೀರ್ ,ಮನ ಮಹಮ್ಮದ್ ಶರೀಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
No comments
Post a Comment