ದುಬೈ (ಗಲ್ಫ್ ಪ್ರತಿನಿಧಿ) : ಕೋವಿಡ್ ಮಹಾಮಾರಿ ಸಮಯದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರು ಸೇರಿ ಲಕ್ಷಾಂತರ ವಿದೇಶಿ ಅನಿವಾಸಿ ಜನರಿಗೆ ಊಟಕ್ಕೆ ಆಹಾರ, ಔಷದಿ, ವಿಮಾನ ಸೇವೆ ಮುಂತಾದ ಕಾರ್ಯಗಳಲ್ಲಿ ದುಬೈ ಕನ್ನಡ ಸಂಘ ಮತ್ತು ದುಬೈ ಕೆ ಎಮ್ ಸಿ ಸಿ ( ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ) ಜೊತೆ ಸೇರಿ ದುಬೈಯ ಬೀದಿ ಗಲ್ಲಿಗಳಲ್ಲಿ ಹೋಗಿ ದುಬೈ ಅರೋಗ್ಯ ಸಂಸ್ಥೆ ಮತ್ತು ದುಬೈ ಪೋಲೀಸರ ಸಹಯೋಗದೊಂದಿಗೆ ಕೋವಿಡ್ ವಾರಿಯರಾಗಿ ಸೇವೆ ನೀಡಿದ್ದಕ್ಕೆ ದುಬೈ ಕೆ ಎಮ್ ಸಿ ಸಿ ಕಾಸರಗೋಡು ಘಟಕ ಬ್ರೇವರಿ ನೋಬಲ್ ಅವಾರ್ಡ್ ಮತ್ತು ಯುಎಇ ಕೆ ಎಮ್ ಸಿ ಸಿ ರಾಜ್ಯ ಸಮಿತಿ ವೈಬ್ರೆನ್ಟ್ ಹೀರೋಸ್ ಅವಾರ್ಡ್ ರಫೀಕಲಿ ಕುಂಡಂಡ ಕುಂಜಿಲ ಅವರಿಗೆ ನೀಡಿ ಗೌರವಿಸಲಾಯಿತ್ತು.
ದುಬೈಯ ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 400 ಕ್ಕೂ ಅಧಿಕ ಸ್ವಯಂ ಸೇವಕರಿಗೆ ಸನ್ಮಾನ ನೀಡಲಾಯಿತ್ತು.


No comments
Post a Comment