ಮಡಿಕೇರಿ : ಮಾನಸಿಕ ಅಸ್ವಸ್ಥ ವ್ಯಕ್ತಿ ನಿಮ್ಹಾನ್ಸ್ ಗೆ ದಾಖಲು

No comments

ಮಡಿಕೇರಿ :ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರನ್ನು ಪ್ರಸಿದ್ಧ ಮನೋರೋಗ ತಪಾಸಣಾ ಆಲಯವಾದ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲು ಮಾಡಲಾಯಿತು.

   ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ನರಳುತ್ತಿದ್ದ ಇವರನ್ನು ಸ್ಥಳೀಯ ಜನರು ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು.

ಅಸ್ಪತ್ರೆಯಲ್ಲಿನ ಆರೋಗ್ಯ ತಪಾಸಣೆಯಲ್ಲಿ ತಲೆಗೆ  ಹೆಚ್ಚಿನ ಆಘಾತವಾಗಿದ್ದು ಹೆಚ್ಚಿನ ಚಿಕಿತ್ಸೆ ಅನಿವಾರ್ಯವೆಂದು ವೈದ್ಯರು ಹೇಳಿದ್ದ ಕಾರಣ  ಪೋಲೀಸ್ ಇಲಾಖೆ ಮಡಿಕೇರಿಯ ಕೊಡಗು ಬ್ಲಡ್ ಡೋನರ್ಸ್ ತಂಡವನ್ನು ಸಂಪರ್ಕಿಸಿತ್ತು. 

     ಮಡಿಕೇರಿ ನಿವಾಸಿಯಾದ ಇವರಿಗೆ ಸಂಬಂಧಿಕರು ಯಾರೂ ಇಲ್ಲವಾದ್ದರಿಂದ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ವಿನು , ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್, ಪತ್ರಕರ್ತ ಚಂದನ್ ನಂದರಬೆಟ್ಟು ಹಾಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಪೋಲೀಸ್ ನೆರವಿನೊಡನೆ ಆ್ಯಂಬುಲನ್ಸ್ ವಾಹನದಲ್ಲಿ ಕರೆದೊಯ್ದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು

No comments

Post a Comment