ಮಡಿಕೇರಿ ನಗರ : ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಚಳುವಳಿಗೆ ಬೆಂಬಲ ಸೂಚಿಸಿ ಮಡಿಕೇರಿ ನಗರದ ಚೌಕಿ ವೃತ್ತದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಅನ್ನಧಾತರ ಮರಣ ಶಾಸನ ಬರೆಯಲು ಪ್ರಯತ್ನಿಸುತ್ತಿರುವುದು ಖಂಡನೀಯ ಕಾಯ್ದೆ ಬದಲಾವಣೆಯ ಹಿಂದಿನ ಉದ್ದೇಶವೇನು? ಸುಗ್ರೀವಾಜ್ಞೆ ಮೂಲಕ ಯೋಜನೆ ಜಾರಿಗೆ ತರುವ ತುರ್ತು ಏನು? ಎಂದು ಪ್ರಶ್ನಿಸಿದರು.
ಎಪಿಎಂಸಿ ಗಳಲ್ಲಿ ದಲ್ಲಾಳಿಗಳನ್ನು ನಿಯಂತ್ರಣ ಮಾಡಲು ಯೋಜನೆ ರೂಪಿಸುವ ಬದಲು ರೈತ ವಿರೋಧಿ ಕಾಯ್ದೆಯನ್ನು ತರುವುದು ಸರಿಯಲ್ಲ.
ಕೃಷಿ ಪ್ರಧಾನ ದೇಶದಲ್ಲಿ ಪ್ರತಿ ಅರ್ಧ ಗಂಟೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಡಾ.ಸ್ವಾಮಿನಾಥನ್ ವರದಿಯಲ್ಲಿ ಬೆಳೆಗಳು ಬೆಳೆಯುವ ಖರ್ಚಿನ ವರದಿ ಇದೆ. ಇದರ ಆಧಾರದಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ರೈತಪರ ನಿಲುವು ತೋರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಮಾಜಿ ನಗರಸಭಾ ಸದಸ್ಯ ಮನ್ಸೂರ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಡ್ಕಾರ್ ಎಸ್ಡಿಪಿಐ ಮುಖಂಡರಾದ ಅಡ್ವೊಕೇಟ್ ಅಮೀನ್ ಮೊಹಿಸಿನ್ ನಗರ ಅಧ್ಯಕ್ಷ ಖಲೀಲ್ ಕ್ರಿಯೇಟಿವ್, ನಗರ ಉಪಾಧ್ಯಕ್ಷರಾದ ಮೈಕಲ್ ವೇಗಸ್, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಶೌಕತ್ ಅಲಿ ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

No comments
Post a Comment