ಮನೆಯೊಳಗೆ ನುಗ್ಗಿ ಕಾಡಾನೆ ದಾಂಧಲೆ - ಕುಟುಂಬಕ್ಕೆ ಕಿಟ್ ವಿತರಿಸಿ ಮಾನವೀಯತೆ ಮೆರೆದ ಸಮೀರ್

No comments

ಸಿದ್ದಾಪುರ:  ಕಾಡಾನೆ ದಾಳಿಯಿಂದ ಮನೆ ಹಾನಿಯಾಗಿ ಅಗತ್ಯ ವಸ್ತುಗಳನ್ನ ಕಳೆದುಕೊಂಡು  ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬ್ಲಾಕ್ ಯುವ  ಕಾಂಗ್ರೆಸ್ ಉಪಾಧ್ಯಕ್ಷ ಸಮೀರ್ .ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಸಮೀರ್ ಪತ್ರಿಕೆಯೊಂದಿಗೆ ಮಾತನಾಡಿ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿಭೋಜ ಎಂಬವರಮನೆಯೊಳಗೆ ನುಗ್ಗಿ  ಹಾನಿ ಪಡಿಸಿದ್ದಲ್ಲದೆ ಆಹಾರ ಪದಾರ್ಥಗಳನ್ನು ತಿಂದು ಮನೆಯಲ್ಲಿದ್ದ ವಸ್ತುಗಳನ್ನು ತುಳಿದು ನಾಶ ಮಾಡಿದೆ.

 

5ದಿನಗಳು ಕಳೆದರು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಕಡೆಗಣಿಸಿದ್ದಾರೆ. ನಿರಂತರ ಕಾಡು ಪ್ರಾಣಿಗಳ ಭಯದ ನಡುವೆ ಬದುಕು ಸಾಗಿಸುತ್ತಿರುವ ಹಾಡಿಯಲ್ಲಿ ಮೂಲಸೌಕರ್ಯ ವಂಚಿತ ವಾಗಿದ್ದು ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.


ಎಂದು ಆರೋಪಿಸಿದ ಅವರು ಹಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು ತನಿಖೆ ಮಾಡುವ ಮೂಲಕ ಹಾಡಿಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

 

ಯುವ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್, ಮನ್ಸೂರ್, ಸಂಶೀರ್,  ಸಿನಾನ್, ಮುಜಾಮಿಲ್ , ರಿಷಾದ್, ನೌಫಲ್ ಹಾಡಿಯ ನಿವಾಸಿಗಳಾದ  ಮಹೇಶ್, ದರ್ಶನ್ ,ಸಿದ್ದು, ಸುಜಿ, ಮಂಜುಳಾ, ನೇತ್ರ ,ದಿವ್ಯಾ, ಲಕ್ಷ್ಮಿ, ತಂಗಮ್ಮ, ಗಣೇಶ ಸೇರಿದಂತೆ ಮತ್ತಿತರರು ಹಾಜರಿದ್ದರು .

No comments

Post a Comment