ನೆಲ್ಯಹುದಿಕೇರಿಯಲ್ಲಿ ನೆಹರು ಯುವಕೇಂದ್ರದ ಸ್ಥಾಪನ ದಿನ ಕಾರ್ಯಕ್ರಮ

No comments
ಸಿದ್ದಾಪುರ :  ನೆಹರು ಯುವ ಕೇಂದ್ರ ಮಡಿಕೇರಿ ಮತ್ತು ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಯುವಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ , ನೆಹರು ಯುವಕೇಂದ್ರದ ಸ್ಥಾಪನ ದಿನ ಕಾರ್ಯಕ್ರಮವು  ಜರುಗಿತು. ಕಾರ್ಯಕ್ರಮದ ಅಂಗವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ಗಿಡ ನೆಟ್ಟು, ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಕಾರ್ಯಕ್ರಮದಲ್ಲಿ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಪಿ.ಸಿ ಅಚ್ಚಯ್ಯ, ಮುತ್ತಪ್ಪ ಯುವಕಲಾ ಸಂಘದ ಅಧ್ಯಕ್ಷ ಅಭಿಲಾಷ್, ಕಾರ್ಯದರ್ಶಿ ಸಚಿನ್, ಉಪಾಧ್ಯಕ್ಷ ಪ್ರಮೋದ್, ಪದಾಧಿಕಾರಿಗಳಾದ ಶಿವದಾಸ್, ಪ್ರಕಾಶ್, ಸುಬ್ರಮಣಿ ಇನ್ನಿತರರು ಹಾಜರಿದ್ದರು.

No comments

Post a Comment