ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ನಾಪೋಕ್ಲು ನಗರದ ಮಾರ್ಕೆಟ್ಬ್ಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದು ದನ್ನು ಪತ್ತೆ ಹಚ್ಚಿದ ನಾಪೋಕ್ಲು ಪೊಲೀಸರು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 27-11-2020 ರಂದು ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ನಾಪೋಕ್ಲು ಠಾಣಾ ವ್ಯಾಪ್ತಿಯ ಮಾರ್ಟೆಟ್ ಬಳಿ ವ್ಯಕ್ತಿಯಾರ್ವ ಅಕ್ರಮವಾಗಿ ಜೇಬಿನಲ್ಲಿ ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುರ್ತಿದ್ದುದನ್ನು ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿ ಆರೋಪಿ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದ ನಿವಾಸಿ ಮಹಮ್ಮದ್ ತಾಹಿರ್ , ಪ್ರಭಾಕರ, ತಂದೆ ನಾರಾಯಣ ಎಂಬಾತನನ್ನು ವಶಕ್ಕೆ ಪಡೆದು ಆರೋಪಿಯಿಂದ 74 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧಿಕ್ಷರಾದ ಶ್ರೀ ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಅನೂಪ್ ಮಾದಪ್ಪರವರ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್ ರವರ ನೇತೃತ್ವದಲ್ಲಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಎ.ಎಸ್.ಐ ಕುಶಾಲಪ್ಪ, ಸಿಬ್ಬಂದಿಗಳಾದ ಮಧುಸೂದನ, ಎಂ.ಪಿ.ಜ್ಯೋತಿಕುಮಾರ, ನವೀನ್, ಮಹೇಶ್, ಹರ್ಶ ಮತ್ತು ಗಿರೀಶ್ ರವರು ಭಾಗವಹಿಸಿದ್ದರು.

No comments
Post a Comment