ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ನಿವೇಶನ ರಹಿತ ಬಡ ಜನರಿಗೆ ಸೂರನ್ನು ಕಲ್ಪಿಸುವಂತೆ ಮನವಿ

No comments

ಕುಶಾಲನಗರ : ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ, ಕೊಡಗು ಜಿಲ್ಲಾ ಸಮಿತಿಯ ವತಿಯಿಂದ  ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನಿವೇಶನ ರಹಿತ ಬಡ ಜನರಿಗೆ ಸೂರನ್ನು ಕಲ್ಪಿಸಬೇಕು ಅನ್ನುವ  ಒತ್ತಾಯದೊಂದಿಗೆ ಇವತ್ತು ಸೋಮವಾರಪೇಟೆ ತಾಲ್ಲೂಕು ಕಂದಾಯ ಪರಿವೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಶರಾದ ಜಯಪ್ರಕಾಶ್. ಹೆಚ್.ಸಿ, ಮಹಿಳಾ ಜಿಲ್ಲಾಧ್ಯಕ್ಶರಾದ ಫಾತಿಮಾ ಖಾನ್,ಉಪಾಧ್ಯಕ್ಷ ರಾದ ಇಬ್ರಾಹಿಂ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್. ಕೆ.ಎ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಆದಂ,ಕುಶಾಲನಗರ ಅಧ್ಯಕ್ಷರಾದ ಶರಣ್,ಸಂಗಮ ಚಾನಲ್ ಮಾಲಿಕರಾದ ಮೋಹನ್ ಕುಮಾರ್ ಹಾಗು ಇನ್ನಿತರರು ಹಾಜರಿದ್ದರು.

No comments

Post a Comment