ವರದಿ :ಉಬೈದ್ ಗುಂಡಿಕೆರೆ
ಮೂರ್ನಾಡು (Times Of Coorg.in) : ಎಸ್.ಎಸ್.ಎಫ್ ಗುಂಡಿಕೆರೆ ಶಾಖೆ ವತಿಯಿಂದ ದಿನಾಂಕ 14-10-2020 ರಂದು ಮಗ್ರಿಬ್ ನಮಾಜ್ ನ ನಂತರ ಶಾಖಾ ಕಚೇರಿ ಯಲ್ಲಿ ಮರ್ಹೂಮ್ ರಫೀಕ್ ಸಖಾಫಿ ಉಸ್ತಾದ್ ರವರ ಹೆಸರಿನಲ್ಲಿ ಅನುಸ್ಮರಣಾ ಸಂಗಮವು ಖಲೀಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು,ಕೊಡಗು ಜಿಲ್ಲಾ ಎಸ್.ಎಸ್.ಎಫ್ ಕಾರ್ಯದರ್ಶಿ ಉಬೈದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಜೀಬ್ ಅಹ್ಮದ್ ಅನುಸ್ಮರಣಾ ಭಾಷಣವನ್ನು ಮಾಡಿದರು. ಎಸ್ ವೈ ಎಸ್ ಶಾಖಾ ಅಧ್ಯಕ್ಷರಾದ ಅಹ್ಮದ್ ಮದನಿ ಉಸ್ತಾದ್ ರವರು ದಿಕ್ರ್, ದುಆಃ ಗೆ ನೇತೃತ್ವವನ್ನು ನೀಡಿದರು. ಖಲೀಲ್ ಸಅದಿ,ಅಬ್ದುಲ್ ನಾಸಿರ್,ಮುಹಮ್ಮದ್ ರಿಯಾಝ್ ಹಾಗೂ ಹಲವು ಕಾರ್ಯಕರ್ತರು ಭಾಗವಹಿಸಿದ್ದರು. ಶಾಖಾ ಕಾರ್ಯದರ್ಶಿ ಉವೈಸ್ ಸ್ವಾಗತಿಸಿದರು.ನಾಸಿರ್ ಸಖಾಫಿ ವಂದಿಸಿದರು.


No comments
Post a Comment