ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ಈ ದಿನ ಅಪರಾಹ್ನ ನಾಪೋಕ್ಲು ವಿನಲ್ಲಿ ಭಾರಿ ಮಳೆ ಸುರಿದಿದ್ದು, ಪಟ್ಟಣದಲ್ಲಿ ಚರಂಡಿ ಮುಚ್ಚಿ ಹೋಗಿರುದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ಕೋಳಿ ಮಾಂಸದ ಅಂಗಡಿಗೆ ನುಗ್ಗಿ ಬಾರಿ ಅವಾಂತರ ಸೃಷ್ಟಿಸಿದೆ. ಕೋಳಿ ಅಂಗಡಿ ಪಕ್ಕದಲ್ಲಿ ಕಳೆದ 8 ತಿಂಗಳಿನಿಂದ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಚರಂಡಿ ಮುಚ್ಚಿ ಹೋಗಿದ್ದು ಈ ಹಿಂದೆ ಕೂಡ ಹಲವು ಬಾರಿ ಮಳೆ ಬಂದಾಗ ನೀರು ಹರಿದು ಹೋಗದೆ ಸಮಸ್ಯೆ ಆದಾಗ ನಾಪೋಕ್ಲು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು ಆ ಸಂದರ್ಭ ಪಂಚಾಯಿತಿ ವತಿಯಿಂದ ಮಣ್ಣು ತೆರವುಗೊಳಿಸಿ ನೀರು ನಿಲ್ಲದಂತೆ ಮಾಡಲಾಗಿತ್ತು.
ಆದರೆ ಕಟ್ಟಡ ಮಾಲೀಕರು ಅವರ ಅನುಕೂಲ ಕ್ಕೊಸ್ಕರ ಮತ್ತೆ ಇದೆ ರೀತಿ ಚರಂಡಿ ಮುಚ್ಚಿದ್ದು, ಇದರಿಂದ ಈ ದಿನ ಅಂಗಡಿಗೆ ನೀರು ನುಗ್ಗಿ ನಷ್ಟ ಉಂಟಾಗಿದ್ದು ಕಟ್ಟಡ ಮಾಲೀಕ ಮತ್ತು ಪಂಚಾಯಿತಿ ವಿರುದ್ಧ ಅಂಗಡಿ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಆದೇಶಕ್ಕೂ ಕ್ಯಾರೇ ಅನ್ನದ ಕಟ್ಟಡ ಮಾಲೀಕನ ವಿರುದ್ಧ ಕ್ರಮ ಕೈಗೊಂಡು
ಮುಂದೆ ಈ ರೀತಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.
No comments
Post a Comment