ನಾಪೋಕ್ಲು (Times Of Coorg) : ಹಲವು ವರ್ಷಗಳಿಂದ ನಿರಂತರವಾಗಿ ನೊಂದ ಬಡವರಿಗೆ ಸಹಾಯ ಹಸ್ತ ಚಾಚುತ್ತ ಬಡವರ ಕಣ್ಣೀರು ಒರೆಸುತ್ತಾ ಬಂದಿರುವ
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ವತಿಯಿಂದ, ಈ ದಿನ ಭಾಗಮಂಡಲ ದಲ್ಲಿ ಅಪಘಾತ ದಲ್ಲಿ ಗಾಯಗೊಂಡ ತಾವೂರ್ ಮದರಸ ವಿದ್ಯಾರ್ಥಿನಿ ಸಫ್ವಾನ ಚಿಕಿತ್ಸೆ ಗಾಗಿ ಸಹಾಯ ಧನ ವನ್ನು ತಾವೂರು ಜಮಾಯತ್ ಅಧ್ಯಕ್ಷ ಅಬ್ದುಲ್ ಲತೀಫ್ ಸಮ್ಮುಖದಲ್ಲಿ ಸಂಘಟನೆಯ ನಿರ್ದೇಶಕರಾದ ಮಹಮ್ಮದ್ ಹಾಜಿ ಕೊಂಡಂಗೇರಿ ಹಸ್ತಾಂತರ ಮಾಡಲಾಯಿತು.
ಊರಿನ ಪ್ರಮುಖರಾದ ಉಸ್ಮಾನ್ ತಾವೂರು , ದುಬಬೈ ಸುನ್ನಿ ವೆಲ್ಫೇರ್ ಉಪಾಧ್ಯಕ್ಷ ಅರಾಫತ್ ನಾಪೋಕ್ಲು, ವೆಲ್ಫೇರ್ ಶಾರ್ಜ ನಾಯಕರಾದ ಸಲಾಂ ಕೊಂಡಗೇರಿ, ಉವೈಸ್ ತಾವೂರ್, ಶಿಯಾಬ್ ತಾವೂರು ಉಪಸ್ಥಿತರಿದ್ದರು.

No comments
Post a Comment