ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು Times Of Coorg:- ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ235000 ರೂಗಳಿಗೆ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ಬೀದಿ ದೀಪ ಅಳವಡಿಕೆ ಕಾರ್ಯ ಕೈಗೊಂಡು ಕೆಲಸ ಮಾಡಿಸುತ್ತಿದ್ದು
ಕಳೆದ ಐದು ವರ್ಷಗಳಿಂದ ನಾಪೋಕ್ಲು ವ್ಯಾಪ್ತಿಯ ಸಾರ್ವಜನಿಕರು ಇಡೀ ಪಟ್ಟಣ ಮತ್ತು ಪಂಚಾಯತಿ ವ್ಯಾಪ್ತಿಯ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದರು ಇದರ ಸಂಬಂಧ ಹಲವು ಬಾರಿ ಸ್ಥಳೀಯರು ಗ್ರಾಮ ಪಂಚಾಯತಿ ಸದಸ್ಯರಲ್ಲಿ ಎಷ್ಟೇ ಕೇಳಿಕೊಂಡರು ಮನವಿ ಮಾಡಿದರೂ ಸ್ಪಂದಿಸಲಿಲ್ಲ
ಇದೀಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುತ್ತೂರು ಮುತುವರ್ಜಿ ವಹಿಸಿಕೊಂಡು ಬೀದಿ ದೀಪ ಅಳವಡಿಕೆ ಕೆಲಸ ಮಾಡುತ್ತಿದ್ದು
ಇದೀಗ ಕಳೆದ ಐದು ವರ್ಷಗಳಿಂದ ನಿದ್ರಾವಸ್ಥೆಯಲ್ಲಿದ್ದ ಕೆಲವು ಮಾಜಿ ಸದಸ್ಯರು ಬೀದಿದೀಪ ಅಳವಡಿಸುತ್ತಿರುವ ಸ್ಥಳದಲ್ಲಿ ನಿಂತುಕೊಂಡು ಇವರೇ ಸ್ವತಹ ಕೆಲಸ ಮಾಡಿಸುತ್ತಿರುವ ಹಾಗೆ ಬಿಂಬಿಸಿ ಮತ ಸೆಳೆಯಲು ಚುನಾವಣಾ ಗಿಮಿಕ್ ಮಾಡುತ್ತಿದ್ದು ಜನರನ್ನು ಮೂರ್ಖರನ್ನಾ ಸುತ್ತಿದ್ದಾರೆ
ಬೇತು ಗ್ರಾಮದ ಮಾಜಿ ಸದಸ್ಯರೊಬ್ಬರು ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಇದೀಗ ಚುನಾವಣೆ ಬರುತ್ತಿದ್ದಂತೆಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಕೆಲಸ ಕಾರ್ಯಗಳು ಕೈಗೆತ್ತಿಕೊಳ್ಳುವಾಗ ಸ್ಥಳದಲ್ಲಿ ಮೊಕ್ಕಾಂ ಹೂಡಿ ಮತ ಸೆಳೆಯುವ ತಂತ್ರ ಮಾಡುತ್ತಿದ್ದಾನೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಹನೀಫ್ ಆರೋಪಿಸಿದ್ದಾರೆ
ಏನೇ ಆದರೂ ಚುನಾವಣೆ ಸಮೀಪಿಸುತ್ತಿದ್ದಂತೆ ಹಲವರು ಮತ ಸೆಳೆಯಲು ಹಲವು ರೀತಿಯ ಭರವಸೆ ನೀಡಿ ಮತ ಸೆಳೆಯುವ ತಂತ್ರ ಸಾಮಾನ್ಯ
ಆದ್ದರಿಂದ ಮತದಾರ ಪ್ರಭುಗಳು ಯಾವುದೇ ಆಮಿಷ ತಂತ್ರಗಳಿಗೆ ಬಲಿಯಾಗದೆ ಗ್ರಾಮದ ಅಭಿವೃದ್ಧಿಪಡಿಸುವಂತ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ನಮ್ಮ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದೇ ಸಜ್ಜನರ ಅಭಿಪ್ರಾಯ
ಇಲ್ಲದಿದ್ದರೆ ಒಂದು ದಿನದ ಆಮಿಷಕ್ಕೆ ಒಳಗಾಗಿ ಮಾಡುವ ತಪ್ಪಿನ ಪರಿಣಾಮ ಐದು ವರ್ಷ ಜನಸಾಮಾನ್ಯರು ಅನುಭವಿಸಲೇಬೇಕು.
No comments
Post a Comment