ಕಣ್ಣೂರು - ಎಸ್ ಡಿ ಪಿ ಐ ಕಾರ್ಯಕರ್ತನ ಬರ್ಬರ ಹತ್ಯೆ
ಅಂತರರಾಜ್ಯ ಸುದ್ದಿ (Times Of Coorg @ಕಣ್ಣೂರು) : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ ) ಕಾರ್ಯಕರ್ತನನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಚಿಟ್ಟಾರಿಪರಂಬ್ ಎಂಬಲ್ಲಿ ನಡೆದಿದೆ. ಎಸ್ ಡಿ ಪಿ ಐ ಕಾರ್ಯಕರ್ತ ಸಯ್ಯಿದ್ ಸಲಾಹುದ್ದೀನ್ (30) ಕೊಲೆಯಾದ ಯುವಕ. ಚಿಂತಾಜನಕ ಸ್ಥಿತಿಯಲ್ಲಿದ್ದ ಸಯ್ಯಿದ್ ಸಲಾಹುದ್ದೀನ್ ರನ್ನು ತಲಶ್ಶೇರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ತಲಶ್ಶೇರಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

No comments
Post a Comment