ಕೊಡ್ಲಿಪೇಟೆ : 179 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕರು
ವರದಿ : ಹನೀಪ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) :ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಮನೆ ಅಡಿ ಸಕ್ರಮೀಕರಣ (ಕ.ಭೂ.ಅ.ಕಲಂ 94ಸಿ) ಯೋಜನೆಯಡಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ವನ್ನು ಕಂದಾಯ ಇಲಾಖೆ ವತಿಯಿಂದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು .
ಕೊಡ್ಲಿಪೇಟೆ .ಬ್ಯಾಡಗೊಟ್ಟ .
ಬೆಸೂರು. ಹಂಡ್ಲಿ ಹಾಗೂ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ 179 ಫಲಾನುಭವಿಗಳಿಗೆ ಶಾಸಕ ಅಪ್ಪಚ್ಚುರಂಜನ್ ರವರು ಹಕ್ಕುಪತ್ರ ವಿತರಿಸಿದರು.
ನಂತರ ಮಾತನಾಡಿದ ಶಾಸಕರು
ಸರಕಾರಿ ಪ್ಯೆಸಾರಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡಿರುವರಿಗೆ ಮನೆ ಅಡಿ ಸ್ಥಳಕ್ಕೆ ಯಾವುದೇ ದಾಖಲಾತಿಗಳಿಲ್ಲದೆ ಒಂದು ರೀತಿಯಲ್ಲಿ ಇದು ನಮ್ಮದೆ ಮನೆಯೇ ಎಂಬ ದ್ರಡತೆ ತಮ್ನತ್ರ ಇರಲಿಲ್ಲ
ಇವತ್ತು ತಮಗೆಲ್ಲರಿಗೂ ಕೂಡ ಸುಯೋಗ ಬಂದಿದೆ
ನನ್ನ ಮನೆಗೆ ಹಕ್ಕುಪತ್ರ ಇದೆ ಇದರ ಮಾಲಿಕ ನಾನೆ ಎಂದು ದ್ಯೆರ್ಯವಾಗಿ ಹೇಳುವಂಥ ಅವಕಾಶ ಸರ್ಕಾರ ತಮಗೆ ನೀಡುತ್ತಿದೆ .
ಹಕ್ಕುಪತ್ರದ ಹಿಂಬದಿಯಲ್ಲಿ ಸರ್ಕಾರ ಹತ್ತು ಷರತ್ತುಗಳನ್ನು ನಮೂದಿಸಿದೆ ಅದನ್ನು ಓದಿಕೊಂಡು ಚಾಚು ತಪ್ಪದೆ ಪಾಲಿಸಬೇಕು ಷರತ್ತುಗಳನ್ನು ಮೀರಿದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಸೂಚಿಸಿದರು.
ಕರೋನಾ ಬೀತಿಯಾ ನಡುವೇಯು ಕೊವಿಡ್ 19 ನಿಯಮಗಳನ್ನು ಪಾಲಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಸ್ಥಳಿಯ ಕಂದಾಯ ಇಲಾಖೆಯ ಕಾರ್ಯವನ್ನು ಪ್ರಶಂಸಿದರು,
ಸೋಮವಾರಪೇಟೆ ತಹಶಿಲ್ದಾರ್ ಗೊವಿಂದ್ ರಾಜು ಪ್ರಸ್ತಾವಿಕವಾಗಿ ಮಾತನಾಡಿ
ಹಕ್ಕುಪತ್ರ ಪಡೆದುಕೊಂಡವರು ಅನುಸರಿಸಬೇಕಾದ ಷರತ್ತುಗಳನ್ನು ವಿವರಿಸಿದರು .
ಮಂಜೂರಾದ 25 ವರ್ಷಗಳ ಅವದಿಯವರೆಗೂ ಬೇರೆ ಯಾರಿಗೂ ಪರಬಾರೆ ಮಾಡಬಾರದೂ ಹಾಗೂ ತಮ್ಮ ಹಕ್ಕುಗಳನ್ನು ವರ್ಗಾಯಿಸಬಾರದೂ .
ವಾಸದ ಮನೆಯಾಗಿ ಹೊರತು ಬೇರೆ ಯಾವುದೇ ಉದ್ದೆಶಕ್ಕೆ ಸದರಿ ಸ್ಥಳದಲ್ಲಿ ಕಟ್ಟಡ ನಿರ್ಮಿಸಬಾರದೂ.
ಸದರಿ ಸ್ಥಳದಲ್ಲಿ ನಿರ್ಮಿಸಿದ ಮನೆಯನ್ನು ತಾವೇ ವಾಸ ಮಾಡುತ್ತಿರಬೇಕು ಬೇರೆಯವರಿಗೆ ಬಾಡಿಗೆಗೆ ನೀಡಬಾರದೂ .
ಸದರಿ ಸ್ಥಳದಲ್ಲಿ ಗ್ರಾಮ ಪಂಚಾಯತಿ ವಸತಿ ಯೋಜನೆಯಡಿ ಅಥವಾ ರಾಷ್ಟ್ರೀಕ್ರತ ಬ್ಯಾಂಕುಗಳಿಂದ ಅಥವಾ ಸಹಕಾರಿ ಸಂಘ ಸಂಸ್ಥೆಗಳಿಂದ ಗ್ರಹ ನಿರ್ಮಾಣಕ್ಕಾಗಿ ಸಾಲ ಪಡೆಯಲು ಅವಕಾಶ ವಿದೆ .
ಹಕ್ಕುಪತ್ರ ದೊಂದಿಗೆ ನಮೂದಿಸಿರುವ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಮಂಜೂರಾದ ಮನೆಯಡಿ ಸ್ಥಳವನ್ನು ರದ್ದು ಮಾಡಿ ನಿರ್ಮಾಣವಾದಂಥ ಮನೆಯನ್ನು ಸರ್ಕಾರದ ಅದೇಶದಂಥೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದರು,
ಸೋಮವಾರಪೇಟೆ ತಾಲೂಕು ಪಂಚಾಯಿತಿ ಅದ್ಯಕ್ಷೆ ಪುಷ್ಪ ರಾಜೇಶ್ ರವರು ಮಾತನಾಡಿದರು,
ಕೊಡ್ಲಿಪೇಟೆ ಉಪತಹಶಿಲ್ದಾರ್ ಪುರುಷೊತ್ತಮ್
ಸ್ವಾಗತಿಸಿದರು , ತಾಲೂಕು ದಿಕಾರಿ ಉಮೇಶ್ ನಿರೂಪಿಸಿ ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕರಾದ ಮನು ಕುಮಾರ್ ವಂದಿಸಿದರು,
ತಾಲೂಕು ಕಚೇರಿಯ ಶಿರೆಸ್ತೆದಾರರುಗಳಾದ
ಮಹೇಶ್ . ಭಾನು ಪ್ರಕಾಶ್ , ತಾಲೂಕು ಕಚೇರಿ ಸಿಬ್ಬಂದಿಗಳಾದ ಮಾಚಯ್ಯ ,ರತನ್ ,
ಮೊಣ್ಣಪ್ಪ , ಗ್ರಾಮ ಲೆಕ್ಕಾದಿಕಾರಿಗಳಾದ
ಶ್ವೇತಾಶ್ರೀ ,ಚ್ಯೆತ್ರಾ ,ವಿದ್ಯಾಶ್ರೀ ,
ಪ್ರಕ್ರತಿ , ಗ್ರಾಮ ಸಹಾಯಕರಾದ
ಮಹೇಶ್ , ರಾಜು ಬೀಮೇಶ್ ,
ಲೋಹಿತ್ , ವಿ.ಎಸ್.ಎಸ್.ಎನ್.ಉಪಾದ್ಯಕ್ಷರಾದ ಯತೀಶ್ ಬಿ.ಕೆ. ಸ್ಥಳಿಯ ಪ್ರಮುಖರಾದ
ಭಗವಾನ್ ಗೌಡ , ರಾಜೇಶ್ ,
ಕೆಂಚೆಶ್ವರ , ನಾಗೇಶ್ ಮಳಲಿ,
ಶೀವ ಕ್ಯಾತೆ ಹಾಜರಿದ್ದರು.




No comments
Post a Comment