ನಾಪೋಕ್ಲು ವಲಯ ಕಾಂಗ್ರೆಸ್ ವತಿಯಿಂದ ಚುನಾವಣಾ ಆಕಾಂಕ್ಷಿಗಳ ಸಭೆ
ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ಗ್ರಾಮ ಪಂಚಾಯತಿ ಚುನಾವಣೆ ಮೀಸಲಾತಿ ಈಗಾಗಲೇ ಪ್ರಕಟವಾಗಿದ್ದು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ದಿನ ನಾಪೋಕ್ಲು ಗ್ರಾಮ ಪಂಚಾಯಿತಿ ಚುನಾವಣೆಯ ಸ್ಪರ್ಧೆಯ ಆಕಾಂಕ್ಷಿಗಳ ಸಭೆಯನ್ನು ನಾಪೋಕ್ಲು ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ಕುಸು ಕುಶಾಲಪ್ಪ ವಹಿಸಿದ್ದರು.
ಈ ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಲೀಂ ಹಾರಿಸ್ ಮಾಜಿ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎ ಇಸ್ಮಾಯಿಲ್ ಹಿರಿಯ ಮುಖಂಡ ಸೋಮಪ್ಪ ಮಾಜಿ ವಕ್ಫ್ ಬೋರ್ಡ್ ಸಲಾಹಾ ಸಮಿತಿ ಅಧ್ಯಕ್ಷ ಎಂಎಚ್ ಅಬ್ದುಲ್ ರಹಿಮಾನ್ ಸಭೆಯನ್ನುದ್ದೇಶಿಸಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ತಯಾರಿಯ ಬಗ್ಗೆ ಮತ್ತು ಯಾವುದೇ ಕಾರಣಕ್ಕೂ ಸ್ಪರ್ಧಿಗಳು ಬಂಡಾಯ ವೇಳದಂತೆ ಹಾಗೂ ಗೆಲುವಿನ ತಂತ್ರದ ಬಗ್ಗೆ ಸಲಹೆಯನ್ನು ನೀಡಿದರು.
ಸಭೆಯಲ್ಲಿ ಸ್ಪರ್ಧಾಕಾಂಕ್ಷಿಗಳು ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯವನ್ನು ಮುಖಂಡರುಗಳ ಗಮನಕ್ಕೆ ತಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆಮಿನಾ
ಮಾಜಿ ಉಪಾಧ್ಯಕ್ಷ ಸಾಬಾ ತಿಮ್ಮಯ್ಯ ಮಾಜಿ ಸದಸ್ಯರುಗಳು ಮುಖಂಡರುಗಳು ಟಿಕೆಟ್ ಆಕಾಂಕ್ಷಿಗಳು ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.

No comments
Post a Comment