ಬೆಟ್ಟದ ಕಾಡು, ಕುಂಬಾರಗುಂಡಿ, ಬರಡಿ, ಗುಯ್ಯ, ಕೂಡುಗದ್ದೆ, ಕರಡಿಗೋಡು ,ಕೊಂಡಂಗೇರಿ ಸೇರಿದಂತೆ ಕಾವೇರಿ ನದಿ ದಡ ಗ್ರಾಮಗಳ ಸಾವಿರಾರು ಮಂದಿ ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದರು.
ನೆಲ್ಯಹುದಿಕೇರಿ - ಸಿದ್ಧಾಪುರ : ಕಾವೇರಿ ನದಿ ಪ್ರವಾಹದಲ್ಲಿ ಸಾವಿರಾರು ಮನೆಗಳು ಜಲಾವೃತ.ನೂರಾರು ಮಂದಿಯ ರಕ್ಷಣೆ
ಸಿದ್ದಾಪುರ (Times Of Coorg) : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರಿನ ಪ್ರವಾಹದಿಂದ ನೆಲ್ಯಹುದಿಕೇರಿ. ಸಿದ್ದಾಪುರ ಭಾಗದ ನದಿ ದಡ ಗ್ರಾಮಗಳ ಸಾವಿರಾರು ಮನೆಗಳು ಜಲಾವೃತಗೊಂಡಿದ್ದು ನೂರಾರು ಮಂದಿಯನ್ನು ಪ್ರವಾಹದಲ್ಲಿ ಸಿಲುಕಿದ ನೂರಾರು ಮಂದಿಯನ್ನು ರಕ್ಷಣೆ ಮಾಡುವಲ್ಲಿ ಪೊಲೀಸ್, ಕಂದಾಯ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವಿಷಯ ತಿಳಿದ ಅಧಿಕಾರಿಗಳು ಬೋಟ್ ಮೂಲಕ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ನೆಲ್ಯಹುದಿಕೇರಿ ಖಾಸಗಿ ಕಟ್ಟಡವೊಂದರಲ್ಲಿ ಬೆಟ್ಟದ ಕಾಡು, ಕುಂಬಾರಗುಂಡಿ ಭಾಗದ ಸಂತ್ರಸ್ತರು 50ಕ್ಕೊ ಹೆಚ್ಚು ಮಂದಿ ಇದ್ದುಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕ ಆಹಾರ ನೀಡಲಾಗುತಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕರಡಿಗೋಡು ಗ್ರಾಮದಲ್ಲಿ ಎರಡು ಕಡೆ ಸಂತ್ರಸ್ತರ ಪರಿಹಾರ ಕೇಂದ್ರ ತೆರೆಯಲಾಗಿದ್ದು ನೂರಾರು ಮಂದಿ ಪರಿಹಾರ ಕೇಂದ್ರದಲ್ಲಿ ಇದ್ದಾರೆ.ಸಂತ್ರಸ್ತ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ಕಂದಾಯ, ಗ್ರಾಮ ಪಂಚಾಯಿತಿ,ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅಪ್ಪಣ್ಣ ತಿಳಿಸಿದ್ದಾರೆ

No comments
Post a Comment