ನಾಪೋಕ್ಲು - ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕಡಿತ"
ನಾಪೋಕ್ಲು (Times Of Coorg) : ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದ ಕಾವೇರಿ ನದಿ ತುಂಬಿ ಹರಿಯುತಿದ್ದು ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮೇಲೆ ನೀರು ಹರಿಯುತಿದ್ದು ಪರಿಣಾಮ ಚೆರಿಯಪರಂಬು- ಕಲ್ಲುಮೊಟ್ಟೆ ಗ್ರಾಮಸ್ತರಲ್ಲಿ ಆತಂಕ ಸೃಷ್ಟಿಮಾಡಿದೆ
ಈ ವ್ಯಾಪ್ತಿಯಲ್ಲಿ ಇವತ್ತು ಬೆಳಿಗ್ಗೆಯಿಂದಲೇ ವಿದ್ಯುತ್ ಕಡಿತ ಗೊಂಡಿದೆ .ಕಳೆದ ವರ್ಷ ಈ ಗ್ರಾಮದಲ್ಲಿ ಮಳೆ ಪ್ರವಾಹದಿಂದ ಹಲವಾರು ಆಸ್ತಿ ಪಾಸ್ತಿ ಹಾನಿಗೊಂಡಿದ್ದು ಪ್ರತಿ ವರ್ಷವು ಇದೇ ರೀತಿ ಆಗುದರಿಂದ ಜನ ಜೀವನ ಕಷ್ಟಕರ ವಾಗುತ್ತಿದೆ
ಆದುದರಿಂದ ಈ ಗ್ರಾಮಕ್ಕೆ ಸೇತುವೆಯ ಅವಶ್ಯಕತೆ ಇದ್ದು
ಸಂಬಂದ ಪಟ್ಟವರು ಈಕಡೆ ಗಮನ ಹರಿಸಿ ಗ್ರಾಮದ ಸಮಸ್ಯೆಗೆ ಸ್ಪಂದಿಸಬೇಕಾಗಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿರಾಜ್ ಪರವಂಡ ಮನವಿ ಮಾಡಿದ್ದಾರೆ. ಅದಲ್ಲದೇ ಕಾವೇರಿ ನದಿ ತುಂಬಿ ಮೂರ್ನಾಡು-ನಾಪೋಕ್ಲು ಮುಖ್ಯರಸ್ತೆಯ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು ಬಹುತೇಕ ನಾಳೆಯಿಂದ ಸಂಪರ್ಕ ಕಡಿತಗೊಳ್ಳಲಿದೆ.




No comments
Post a Comment