ಎಸ್ಎಸ್ಎಫ್ ರಾಜ್ಯಮಟ್ಟದ ದಅವಾ ವಿಭಾಗ ತನಾಫುಸ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ
ಸೋಮವಾರಪೇಟೆ (Times Of Coorg) : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ನಡೆಸಿದ ರಾಜ್ಯ ಮಟ್ಟದ ದಅವಾ ವಿಭಾಗದ ತನಾಫುಸ್ 2020 ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದಿದೆ. ಧಾರ್ಮಿಕ ವಿಧ್ಯಾಭ್ಯಾಸ ಕಲಿಯುವ ಮುತಅಲ್ಲಿಮರಿಗೆ ಏರ್ಪಡಿಸಿದ ಸ್ಪರ್ಧೆಯು ಆಗಸ್ಟ್ 28,29,30 ದಿನಾಂಕಗಳಲ್ಲಿ ಆನ್ ಲೈನ್ ಮೂಲಕ ನಡೆದಿತ್ತು. ಕೊಡಗು ಜಿಲ್ಲೆಯಿಂದಲೂ ಮುತಅಲ್ಲಿಮರು ಭಾಗವಹಿಸಿದರು. ಕ್ವಿಝ್ ಸ್ಪರ್ಧೆಯಲ್ಲಿ ಮುಹಮದ್ ಸಾಲಿಕ್ ಅಯ್ಯಂಗೇರಿ ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಮುಹಮದ್ ಶಫೀಕ್ ಪ್ರಥಮ ಸ್ಥಾನ, ಉರ್ದು ಭಾಷಣ ಸ್ಪರ್ಧೆಯಲ್ಲಿ ಸುಫಿಯಾನ್ ಪಿ.ಎ ದ್ವಿತೀಯ ಸ್ಥಾನ, ಡಿಬೇಟ್ ನಲ್ಲಿ ಹೊಸತೋಟದ ಶರೀಫ್ ಎ.ಪಿ ದ್ವೀತಿಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೊಡಗು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ಪ್ರತಿಭೆಗಳಿಗೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ಅಭಿನಂದನೆಗಳನ್ನು ತಿಳಿಸಿದೆ.

No comments
Post a Comment