ಕೊಡಗು ಜಿಲ್ಲಾ ಪಂಚಾಯತ್ ನೂತನ ಸಿಇಒ ಅಧಿಕಾರ ಸ್ವೀಕಾರ

No comments

 ಮಡಿಕೇರಿ (Times Of Coorg):-ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಭನ್ವರ್ ಸಿಂಗ್ ಮೀನಾ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.

 ಪ್ರಭಾರ ಜಿ.ಪಂ ಸಿ.ಇ.ಒ ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಗರದ ಜಿ.ಪಂ.ಭವನದಲ್ಲಿ ನೂತನ ಸಿ.ಇ.ಒ ಭನ್ವರ್ ಸಿಂಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

 ರಾಜಸ್ತಾನ ಮೂಲದವರಾದ ಭನ್ವರ್ ಸಿಂಗ್ ಮೀನಾ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರೋಬೆಷನರಿ ಅವಧಿ ಪೂರ್ಣಗೊಳಿಸಿ, ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಐಪಿಎಸ್ ಉತ್ತೀರ್ಣಗೊಂಡು ತರಬೇತಿ ಪಡೆದ ಬಳಿಕ, ಐ.ಎ.ಎಸ್ ಪರೀಕ್ಷೆ ಪೂರ್ಣಗೊಳಿಸಿರುವ ಭನ್ವರ್ ಸಿಂಗ್ ಮೀನಾ ಅವರು ಐಐಟಿಯಲ್ಲಿ (ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವ್ಯಾಸಂಗ ಮಾಡಿದ್ದಾರೆ.

No comments

Post a Comment