ಕೊಡಗು ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೋನಾ ಪಾಸಿಟಿವ್ / 26 ಆಗಸ್ಟ್ 2020 ಬುಧವಾರ

No comments

       ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ 3 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 8 ಹೊಸ ಕೋವಿಡ್ ಪ್ರಕರಣ ಸೇರಿ, ಒಟ್ಟು 11 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

       ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬಸಪ್ಪ ಲೇಔಟಿನ 45 ವರ್ಷದ ಪುರುಷ.  ಸೋಮವಾರಪೇಟೆ ನೀರುಗುಂದ ಗ್ರಾಮದ ಸರ್ಕಾರಿ ಶಾಲೆ ಬಳಿಯ 21 ವರ್ಷದ ಮಹಿಳೆ. ಕುಶಾಲನಗರ ಬೈಚನಹಳ್ಳಿಯ 77 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

       ಮಡಿಕೇರಿ ಕನ್ನಂಡಬಾಣೆ ದೃಷ್ಟಿಗಣಪತಿ ದೇವಾಲಯ ಸಮೀಪದ 52 ವರ್ಷದ ಪುರುಷ, ಕೂಡಿಗೆ ಕೂಡ್ಲೂರು ನವಗ್ರಾಮ ಬಡಾವಣೆಯ 50 ವರ್ಷದ ಪುರುಷ, 16 ವರ್ಷದ ಬಾಲಕ ಮತ್ತು 45 ಮತ್ತು 20 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.

       ಹೆಬ್ಬಾಲೆ ಮರೂರಿನ ಬಸವೇಶ್ವರ ಆಂಜನೇಯ ದೇವಾಲಯ ಬಳಿಯ 45 ವರ್ಷದ ಪುರುಷ, ವಿರಾಜಪೇಟೆ ಸುಣ್ಣದ ಬೀದಿಯ 76 ವರ್ಷದ ಪುರುಷ, ಗೋಣಿಕೊಪ್ಪ  ಪಟೇಲ್ ನಗರದ 27 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

       ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1250 ಆಗಿದ್ದು, 970 ಮಂದಿ ಗುಣಮುಖರಾಗಿದ್ದಾರೆ. 263 ಸಕ್ರಿಯ ಪ್ರಕರಣಗಳಿದ್ದು, 17 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 226 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment