ಎ.ಕೆ ಸುಬ್ಬಯ್ಯ - ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಮಾಲ್ದಾರೆ ವ್ಯಾಪ್ತಿಯ ಹಾಡಿಗಳಲ್ಲಿ ದಿನಸಿ ಕಿಟ್ ವಿತರಣೆ

No comments

ಸಿದ್ದಾಪುರ (Times Of Coorg) :ಎ.ಕೆ ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ದಿವಂಗತ ಎ.ಕೆ. ಸುಬ್ಬಯ್ಯ ಅವರ ಮೊದಲ ವರ್ಷದ ಸ್ಮರಣಾ ದಿನದ ಅಂಗವಾಗಿ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ವ್ಯಾಪ್ತಿಯ ಹಾಡಿಗಳ  ನೂರಾರು ಫಲಾನುಭವಿಗಳಿಗೆ ದಿನಸಿ ಕಿಟ್ಟು ಗಳನ್ನು ವಿತರಿಸಲಾಯಿತು.


ತಟ್ಟಳ್ಳಿ ಹಾಡಿಯಲ್ಲಿ ನಡೆದ ಕಿಟ್  ವಿತರಣಾ ಕಾರ್ಯಕ್ರಮದಲ್ಲಿ  ಟ್ರಸ್ಟಿನ ವ್ಯವಸ್ಥಾಪಕ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ದಿನಸಿ ಕಿಟ್ ವಿತರಣೆ ಮಾಡಿದರು.


 ಬಳಿಕ ಮಾತನಾಡಿದ ಅವರು ಕೋವಿಡ್ ಸಂಕಷ್ಟ ಕಾಲದಲ್ಲಿ ತೊಂದರೆ ಅನುಭವಿಸಿದ ಜನತೆಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಒಂದು ತಿಂಗಳಿಗೆ ಬೇಕಾದ ಆಹಾರ ಪದಾರ್ಥಗಳ ಕಿಟ್ಗಳನ್ನು ವಿರಾಜಪೇಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಕುಟುಂಬಗಳ ಫಲಾನುಭವಿಗಳಿಗೆ ಕಿಟ್ ವಿತರಿಸಲಾಗಿದ್ದು ಮುಂದಿನ ದಿನಗಳಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ  ಟ್ರಸ್ಟ್ ಮುಂದಾಗಲಿದೆ ಎಂದರು.


ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ  ಮಾತನಾಡಿ, ದಿವಂಗತ ಎ.ಕೆ ಸುಬ್ಬಯ್ಯನವರ ರಾಜಕೀಯ ನಿಲುವು, ಶೋಷಿತ ಸಮುದಾಯಗಳ ಕುರಿತು ಅವರು ಹೊಂದಿದ್ದ ಕಾಳಜಿಯ ಬಗ್ಗೆ ಮಾತನಾಡಿದರಲ್ಲದೆ,


ಕೊಡಗಿನ ಸಮಸ್ಯೆಗಳ ಬಗ್ಗೆ ಅವರ ನಿರಂತರ ಹೋರಾಟವನ್ನು ಮೆಲುಕುಹಾಕಿದರು.ಯಾವುದೇ ಸಮಸ್ಯೆಗಳಿದ್ದಲ್ಲಿ ಎಲ್ಲ ಬಾಂಧವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ದಿಡ್ಡಳ್ಳಿ ಆದಿವಾಸಿಗಳಿಗೆ ಹೋರಾಟದ ಮೂಲಕ ಶಾಶ್ವತ ಸೂರು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎ.ಕೆ ಸುಬ್ಬಯ್ಯನವರು  ಜಿಲ್ಲೆಯ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.


ಇದೀಗ  ಎ .ಎಸ್ ಪೊನ್ನಣ್ಣ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ನಾವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು.


.ಈ ಸಂದರ್ಭ  ಮಾಲ್ದಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ತೋಮಸ್ , ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ ,ಡಿ.ಪಿ.ರಾಜೇಶ್ ಪದ್ಮನಾಭ, ಟ್ರಸ್ಟಿ ಎ.ಎಸ್. ನರೇನ್ ಕಾರ್ಯಪ್ಪ,ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿನ್ನಮ್ಮ, ಕಾವೇರಮ್ಮ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿಎ ಹಂಸ


,ವಕೀಲ  ನರೇಂದ್ರ ಕಾಮಾತ್,ಸೋನಿಯಾಗಾಂಧಿ ಬ್ರಿಗೇಡ್ ಜಿಲ್ಲಾಧ್ಯಕ್ಷ  ಜಾನ್ಸನ್ ,ಪ್ರಮುಖರಾದ ಲೋಹಿತ್ ,ಕೇಶವ ಕಾಮತ್ ,ಬ್ಲಾಕ್ ಯುವ ಕಾಂಗ್ರೆಸ್  ಉಪಾಧ್ಯಕ್ಷ ಸಮೀರ್.ಕಿಸಾನ್ ಘಟಕದ  ಮಹಮ್ಮದ್ ಅಲಿ,ಉಮೇಶ್,  ಲಲೀತ. ಹಾಡಿ ಮುಖಂಡ ಶಂಕರ್ ಸೇರಿದಂತೆ ಮತ್ತಿತರರು ಇದ್ದರು.

No comments

Post a Comment