"ಔರ್ ಫ್ಯಾಮಿಲಿ ಚಾರಿಟಿ ಗ್ರೂಪ್" ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

No comments

ಮಡಿಕೇರಿ (Times Of Coorg) :ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ  ಪಿಯುಸಿ ಪರೀಕ್ಷೆಯಲ್ಲಿ  ಸಾಧನೆ ಮಾಡಿದ  ಕುಟುಂಬದ ವಿದ್ಯಾರ್ಥಿಗಳಿಗೆ  ಔರ್ ಫ್ಯಾಮಿಲಿ ಚಾರಿಟಿ ಗ್ರೂಪ್ ನಿಂದ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ  ಸನ್ಮಾನಿಸಲಾಯಿತು.

ಕೋವಿಡ್-19 ಕಾರಣದಿಂದ  ಸರಳ ಸಮಾರಂಭವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ  ಅಧ್ಯಕ್ಷತೆಯನ್ನು ಔರ್ ಗ್ರೂಪ್ ಕುಟುಂಬದ   ಹಿರಿಯರು,   ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ  ಕೆ.ಎ ಯಾಕುಬ್ ವಹಿಸಿದ್ದರು.
ಎಸ್.ಎಸ್.ಎಲ್.ಸಿ  ಪರೀಕ್ಷೆಯಲ್ಲಿ  ಅತೀ ಹೆಚ್ಚು ಅಂಕಗಳಿಸಿ ಅಸಾಮಾನ್ಯ ಸಾಧನೆ ಮಾಡಿದ ಶುಹೇಬ್ ಬಜೆಗುಂಡಿ ಹಾಗೂ  ಮುಫ್ಸೀನರವರಿಗೆ ಪಿ.ಅಬ್ಬಾಸ್ ಹಾಜಿ ಶನಿವಾರಸಂತೆ ಸನ್ಮಾನಿಸಿದರು.

ದ್ವಿತೀಯಾ  ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಸಾಧನೆ ಮಾಡಿದ ರಝಾನ ರವರಿಗೆ ಅವರ ಅನುಪಸ್ತಿತಿಯಲ್ಲಿ ಅವರ ಕುಟುಂಬಸ್ತರಿಗೆ ಪ್ರಶಸ್ತಿ  ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಔರ್ ಫ್ಯಾಮಿಲಿ ಚಾರಿಟಿ ಗ್ರೂಪ್ ಪ್ರಮುಖರು  ಹಸ್ತಾಂತರಿಸಿದರು. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿ  ಮೂಡಿಬರಲಿ ಎಂದು ಗ್ರೂಪಿನ ಎಲ್ಲಾ ಕುಟುಂಬದ ಸದಸ್ಯರು ಶುಭಹಾರೈಸಿದರು.

ಔರ್ ಫ್ಯಾಮಿಲಿ
ಚಾರಿಟಿ  ಗ್ರೂಪ್ ಸಂಸ್ಥಾಪಕರಾದ  ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು.  ಹಾರಿಸ್ ಗೋಪಾಲಪುರ ಸ್ವಾಗತಿಸಿದರು.  ಚಾರಿಟಿ ಗ್ರೂಪ್ ಸಹ ಸಂಸ್ಥಾಪಕರಾದ ಯೂಸುಫ್ ದುಬೈ, ಹುಸೇನ್ ಫೈಜಿ  ಬಜೆಗುಂಡಿ,ಅಬ್ದುಲ್ ರಜಾಕ್ ಬಜೆಗುಂಡಿ,ರಿಯಾಜ್ ಕುಶಾಲನಗರ, ಇರ್ಶಾದ್ ಕೂಡಿಗೆ, ನೌಶಾದ್ ಯಾಕುಬ್,ಸಿದ್ದಿಕ್ ಪೆರಿಯಡ್ಕ  ಹಾಗೂ  ಸದಸ್ಯರು ವಿದೇಶದಿಂದ  ಸಾಧಕ ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ಔರ್ ಫ್ಯಾಮಿಲಿ ಚಾರಿ ಗ್ರೂಪ್  ಕುಟುಂಬದಸ್ಥರು ಪಾಲ್ಗೊಂಡಿದ್ದರು.

No comments

Post a Comment