ಅತ್ತಿಮಂಗಲ- ಬರಡಿ ರಸ್ತೆ ಬಂದ್.ಸ್ಥಳಕ್ಕೆ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಭೇಟಿ

No comments

ಸಿದ್ದಾಪುರ (Times Of Coorg) : ಹಲವಾರು ವರ್ಷಗಳಿಂದಲೂ ಸಾರ್ವಜನಿಕ  ಸಂಪರ್ಕವಾಗಿದ್ದ ಅತ್ತಿಮಂಗಲ- ಬರಡಿ ರಸ್ತೆಯನ್ನು ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ತಮಗೆ ಸೇರಿದೆ ಎಂದು  ಗುಂಡಿ ತೆಗೆದು ಬೇಲಿ ಹಾಕಿ ಸಂಪರ್ಕ ಬಂದ್ ಮಾಡಿರುವ  ಸ್ಥಳಕ್ಕೆ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹಾಗೂ ಹೈಕೋರ್ಟ್‌ನ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಸ್ಥರಿಂದ ಅಹವಾಲು ಹಾಗೂ ಪಂಚಾಯಿತಿ ಅಧಿಕಾರಿಯಿಂದ ಮಾಹಿತಿ ಸ್ವೀಕರಿಸಿ ಪತ್ರಿಕೆಯೊಂದಿಗೆ ಮಾತನಾಡಿ ಹಲವು ವರ್ಷಗಳಿಂದ ಬರಡಿ ಸುತ್ತಮುತ್ತಲ ಗ್ರಾಮದವರು ಉಪಯೋಗಿಸುತ್ತಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಬಂದ್ ಮಾಡಿದ್ದಾರೆ.ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು ಗ್ರಾಮ ಪಂಚಾಯಿತಿಯಿಂದಲೂ ಹೈಕೋರ್ಟಿಗೆ ಅಪೀಲು ದಾಖಲಿಸಲು ಕ್ರಮ ವಹಿಸಿದ್ದಾರೆ.ಅವರ ವಕೀಲರೊಂದಿಗೆ ಮಾತುಕತೆ ನಡೆಸಲಾಗಿದೆ. 
ಸಾರ್ವಜನಿಕ ರಸ್ತೆ ಬಂದ್ ಮಾಡುವುದು ಸರಿಯಲ್ಲ. ಇದರ ಬಗ್ಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ ಸಾವಿರಾರು ಕುಟುಂಬಗಳು ವಾಸವಾಗಿರುವ ಗ್ರಾಮಕ್ಕೆ ಪ್ರಮುಖ ರಸ್ತೆಯಾಗಿದ್ದು ಕಳೆದ ಹಲವು  ವರ್ಷಗಳಿಂದಲೂ ಸಾರ್ವಜನಿಕ ರಸ್ತೆಯಾಗಿದ್ದು ಕಾರ್ಮಿಕರು ,ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ದಿನನಿತ್ಯ ಸಂಚರಿಸುತ್ತಿದ್ದು ಕಳೆದ ನಲವತ್ತು ದಿನಗಳ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ .

ಮುಂದಿನ ದಿನಗಳಲ್ಲಿ ಜನರ ಪರವಾಗಿ ನಿಂತು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಗ್ರಾಮದ ನಿವಾಸಿ ರಹೀಂ ಮಾತನಾಡಿ ಅತ್ತಿಮಂಗಲ ಮುಖ್ಯರಸ್ತೆಯಿಂದ ನಲ್ವತ್ತೇಕರೆ, ಬರಡಿ ಸೇರಿದಂತೆ ಇತರ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿದ್ದು.ಕಳೆದ ಹಲವು ವರ್ಷಗಳಿಂದಲೂ ವಿವಿಧ ಯೋಜನೆ ಯ ಮೂಲಕ ಅಭಿವೃದ್ಧಿ ಪಡಿಸಲಾಗಿದ್ದುಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ತಮಗೆ ಸೇರಿದೆ ಎಂದು ರಸ್ತೆ ಅಗೆದು ಬೇಲಿ ಹಾಕಿದ್ದಾರೆ .ಇದರಿಂದ ತುರ್ತು ಸಂದರ್ಭದಲ್ಲಿ ತೆರಳುವ ಮಂದಿ ಹಾಗೂ ನ್ಯಾಯಬೆಲೆ ಅಂಗಡಿ ಪಡಿತರ ಸಾಗಾಣಿಕೆ, ದೇವಸ್ಥಾನ,ಮಸೀದಿಗೆ ಮತ್ತು ಕೆಲಸಕ್ಕೆ ತೆರಳುವ ಕಾರ್ಮಿಕರು ತೆರಳುವವರಿಗೆ ಸಮಸ್ಯೆಯಾಗಿದೆ.ಬಂದ್ ಮಾಡಿರುವ ರಸ್ತೆ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು  ಹಿರಿಯ ವಕೀಲ ಪೊನ್ನಣ್ಣ ಹಾಗೂ ಐ ಎನ್ ಟಿ ಯು ಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ  ಅವರಿಗೆ   ಮನವಿ ನೀಡಿದರು.
ಈ ಸಂದರ್ಭ  ತಾಲ್ಲೂಕು ಪಂಚಾಯಿತಿ ಸದಸ್ಯೆ  ಸುಹಾದ ಅಶ್ರಫ್, ನೆಲ್ಯಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗಿಸ್,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹಕೀಂ, ಅಪ್ಸಲ್, ಶುಕೂರ್, ಹನೀಪ್, ಸಂಶು, ಐ ಎನ್ ಟಿ ಯುಸಿ ಜಿಲ್ಲಾ ಕಾರ್ಯದರ್ಶಿ ರಹೀಂ ಗ್ರಾಮದ ಪ್ರಮುಖರಾದ ದೇವರಾಜ್, ಆಶಿಕ್, ಜೋನಿ, ಅಂದು, ವಿಜು, ಅರುಣ್, ಪ್ರವೀಣ್, ನವೀನ್ ಸೇರಿದಂತೆ ಮತ್ತಿತರರು  ಹಾಜರಿದ್ದರು 
.

No comments

Post a Comment