ನಾಪೋಕ್ಲು : ರಾಷ್ಟ್ರಪತಿ ಪದಕ ವಿಜೇತ ವೃತ್ತ ನಿರೀಕ್ಷಕ ಸಿ ಎನ್ ದಿವಾಕರ್ ರವರಿಗೆ ಸನ್ಮಾನ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ವತಿಯಿಂದ ರಾಷ್ಟ್ರಪತಿ ಪದಕ ವಿಜೇತ ಮಡಿಕೇರಿ ವೃತ್ತ ನಿರೀಕ್ಷಕರಾದ ಸಿ. ಎನ್. ದಿವಾಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಾಪೋಕ್ಲುವಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯದ ಸಮಿತಿಯ ಅಧ್ಯಕ್ಷ ರಾದ ಬಿ. ಎಸ್. ತಮ್ಮಯ್ಯ, ಜ್ಯಾತ್ಯಾತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮನ್ಸೂರ್ ಆಲಿ, ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್,ನಾಪೋಕ್ಲು ಜಮಾಹತ್ ಅಧ್ಯಕ್ಷ ಸಲೀಮ್ ಹಾರಿಸ್, ಅಂಬಿ ಕಾರ್ಯಪ್ಪ, ಪ್ರದೀಪ್, ಮೈಸಿ, ಮುಂತಾದವರು ಅವರ ಸೇವೆಗಳನ್ನು ಕೊಂಡಾಡಿದರು.



No comments
Post a Comment