ಕೊಡಗು ಜಿಲ್ಲೆಯಲ್ಲಿ ಇಂದು 29 ಹೊಸ ಕೋವಿಡ್ ಪ್ರಕರಣಗಳು ದೃಢ

No comments

       ಮಡಿಕೇರಿ (Times Of Coorg):- ಜಿಲ್ಲೆಯಲ್ಲಿ ಶುಕ್ರವಾರ ಬೆಳ್ಳಿಗೆ 8:30ರ ವೇಳೆಗೆ 10 ಮತ್ತು  ಮಧ್ಯಾಹ್ನ 2 ಗಂಟೆ ವೇಳೆಗೆ 19 ಸೇರಿದಂತೆ ಒಟ್ಟು 29 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

        ವಿರಾಜಪೇಟೆಯ ಬೊಯಿಕೇರಿ ಗ್ರಾಮ ಅಂಚೆಯ ಕರಗೂರಿನ 28 ವರ್ಷದ ಪುರುಷ. ಸೋಮವಾರಪೇಟೆ ತೊರೆನೂರಿನ 27 ವರ್ಷದ ಮಹಿಳೆ. ಮಡಿಕೇರಿ ಚೈನ್‍ಗೇಟ್ ಬಳಿಯ 54 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯದ 50 ವರ್ಷದ ಪುರುಷ. ವಿರಾಜಪೇಟೆ ಪೆÇನ್ನಂಪೇಟೆಯ ಕುಂದಾ ರಸ್ತೆಯ 50 ವರ್ಷದ ಪುರುಷ. ವಿರಾಜಪೇಟೆ ಪೆÇನ್ನಂಪೇಟೆಯ 53 ವರ್ಷದ ಮಹಿಳೆ. ಸಂಪಾಜೆ ಕೊಯ್ನಾಡುವಿನ 32 ವರ್ಷದ ಮಹಿಳೆ. ಮಡಿಕೇರಿ ಎಲ್‍ಐಸಿ ಕಚೇರಿ ಬಳಿಯ 53 ವರ್ಷದ ಮಹಿಳೆ. ಶನಿವಾರಸಂತೆಯ ದುಂಡಳ್ಳಿಯ 47 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ವಿರಾಜಪೇಟೆಯ ವಿಜಯನಗರದ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

       ಸೋಮವಾರಪೇಟೆಯ ಗೆಜ್ಜೆಹನಕಾಡುವಿನ 63 ವರ್ಷದ ಮಹಿಳೆ. ಸೋಮವಾರಪೇಟೆಯ ಗೌಡಳ್ಳಿಯ ಆರೋಗ್ಯ ವಸತಿ ಗೃಹದ 54 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ. ಸೋಮವಾರಪೇಟೆಯ ಕುಶಾಲನಗರದ ತಾವರೆಕೆರೆಯ 58 ವರ್ಷದ ಮಹಿಳೆ. ಸೋಮವಾರಪೇಟೆಯ ರೇಂಜರ್ ಬ್ಲಾಕಿನ 25 ವರ್ಷದವ 2 ಪುರುಷರು. ಸೋಮವಾರಪೇಟೆ ಸುಂಟಿಕೊಪ್ಪದ ಕೆಇಬಿ ರಸ್ತೆಯ ಅಪ್ಪಾರಂಡ ಎಕ್ಸ್ ಟೆಂಷನ್ ನ 9 ವರ್ಷದ ಬಾಲಕಿ. ವಿರಾಜಪೇಟೆ ಸಿದ್ದಾಪುರದ ಎಂ.ಜಿ ರಸ್ತೆಯ ಜಿಎಂಪಿ ಶಾಲೆ ಬಳಿಯ 48 ವರ್ಷದ ಪುರುಷ. ಸಿದ್ದಾಪುರದ ಅಂಬೇಡ್ಕರ್ ನಗರದ 32 ವರ್ಷದ ಮಹಿಳೆ. ವಿರಾಜಪೇಟೆಯ ಚಿಕ್ಕಪೇಟೆಯ 9 ನೇ ಬ್ಲಾಕಿನ 22 ವರ್ಷದ ಪುರುಷ. ಸೋಮವಾರಪೇಟೆಯ ಮಾದಾಪುರ ಜಂಬೂರು ಬಾಣೆಯ 77 ವರ್ಷದ ಮಹಿಳೆ. ಸೋಮವಾರಪೇಟೆ ಚೆಟ್ಟಳ್ಳಿಯ ಅಭ್ಯಾಲದ 22 ವರ್ಷದ ಮಹಿಳೆ. ಸೋಮವಾರಪೇಟೆ ಶಾಂತಳ್ಳಿ ಬಸವನಕಟ್ಟೆಯ 45 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ವಿರಾಜಪೇಟೆಯ ಗೋಣಿಕೊಪ್ಪದ ತಿತಿಮತಿಯ 36 ವರ್ಷದ ಪುರುಷ. ವಿರಾಜಪೇಟೆಯ ಸುಣ್ಣದಬೀದಿಯ 53 ವರ್ಷದ ಪುರುಷ.  ಕುಶಾಲನಗರ ಮುಳ್ಳುಸೋಗೆಯ 61 ವರ್ಷದ ಪುರುಷ, 55 ವರ್ಷದ ಮಹಿಳೆ, 28 ವರ್ಷದ ಮಹಿಳೆ, 21 ವರ್ಷದ ಪುರುಷ, 90 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

       ಜಿಲ್ಲೆಯಲ್ಲಿ ಒಟ್ಟು 639 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 381 ಮಂದಿ ಗುಣಮುಖರಾಗಿದ್ದಾರೆ. 248 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 184 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment