ಕೊಡಗು ಜಿಲ್ಲೆಯಲ್ಲಿ ಇಂದು 25 ಜನರಿಗೆ ಕೊರೋನಾ ಪಾಸಿಟಿವ್
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 9 ಹೊಸ ಕೋವಿಡ್ ಪ್ರಕರಣಗಳು ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 16 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 25 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿಯ ಹಿಲ್ ರಸ್ತೆಯ ಮುನೀಶ್ವರ ದೇವಾಲಯ ಬಳಿಯ 34 ವರ್ಷದ ಮಹಿಳೆ. ಮಡಿಕೇರಿ ಕಾರಗುಂದ ಟೌನ್ ಶಾಲೆ ಬಳಿಯ 33 ವರ್ಷದ ಮಹಿಳೆ. ಸೋಮವಾರಪೇಟೆ ಗಾಂಧಿನಗರ ಮಾರಿಯಮ್ಮ ದೇವಾಲಯ ಬಳಿಯ 19 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪ 1 ನೇ ಬ್ಲಾಕಿನ 53 ವರ್ಷದ ಪುರುಷ. ವಿರಾಜಪೇಟೆ ಗಾಂಧಿನಗರದ 48 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಗೋಣಿಕೊಪ್ಪ ಆರೋಗ್ಯ ವಸತಿ ಗೃಹದ 42 ವರ್ಷದ ಮಹಿಳೆ. ಸೋಮವಾರಪೇಟೆ ಹೊಸ ಬಡಾವಣೆ ಎಂ.ಜಿ ಬ್ಲಾಕಿನ 4 ವರ್ಷದ ಬಾಲಕಿ. ವಿರಾಜಪೇಟೆ ಬೆಟೋಳಿ ಅಂಚೆಯ ರಾಮನಗರ ಗ್ರಾಮದ 70 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರ ಶಿರಂಗಾಲದ ಶಿರಂಗಾಲ ಗೇಟಿನ 42 ವರ್ಷದ ಪುರುಷ. ಮಡಿಕೇರಿ ನಾಪೋಕ್ಲುವಿನ ಕೊಳಕೇರಿಯ 33 ವರ್ಷದ ಮಹಿಳೆ. ಮಡಿಕೇರಿ ಚೇರಂಬಾಣೆ ಕೊಳಗದಾಳು ಅಯ್ಯಪ್ಪ ಕಾಲೋನಿಯ 53 ವರ್ಷದ ಪುರುಷ. ಮಡಿಕೇರಿ ನಾಪೆÇೀಕ್ಲುವಿನ ಭರತ್ ಬೇಕರಿಯ 59 ವರ್ಷದ ಮಹಿಳೆ. ಸೋಮವಾರಪೇಟೆ ಹಾಲೇರಿ ಗ್ರಾಮದ ತತ್ತಿಬಾಣೆ ಪೈಸಾರಿಯ 49 ವರ್ಷದ ಪುರುಷ. ಮಡಿಕೇರಿ ಕಾವೇರಿ ಲೇಔಟಿನ ಸುರಕ್ಷಾ ಹೋಮಿನ 56 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮುತ್ತಪ್ಪ ದೇವಾಲಯ ಹಿಂಭಾಗದ ಮಲ್ಲಿಕಾರ್ಜುನ ನಗರ ಬಳಿಯ 32 ವರ್ಷದ ಮಹಿಳೆ. ಹಾಸನ ಅರಕಲಗೋಡು ಬೈಪಾಸ್ ರಸ್ತೆಯ 25 ಮತ್ತು 24 ವರ್ಷದ ಪುರುಷರು. ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 19 ಮತ್ತು 38 ವರ್ಷದ ಮಹಿಳೆ. ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 36 ವರ್ಷದ ಪುರುಷ. ಮಡಿಕೇರಿ ಮಲ್ಲಿಕಾರ್ಜುನ ನಗರದ 42 ವರ್ಷದ ಮಹಿಳೆ, 17 ವರ್ಷದ ಬಾಲಕ, 10 ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಟ್ಟು 1003 ಆಗಿದ್ದು, 686 ಮಂದಿ ಗುಣಮುಖರಾಗಿದ್ದಾರೆ. 305 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 255 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment