ಕೊಡಗು ಜಿಲ್ಲೆಯಲ್ಲಿ ಇಂದು 16 ಹೊಸ ಕೋವಿಡ್ ಪ್ರಕರಣಗಳು ಧೃಢ
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ 1:30 ರ ವೇಳೆಗೆ 16 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಿರಾಜಪೇಟೆಯ ಕುಟ್ಟದ ಪೂಜೆ ಕಲ್ಲುವಿನ 65 ವರ್ಷದ ಮಹಿಳೆ. ಸೋಮವಾರಪೇಟೆ ಚೌಡ್ಲುವಿನ 14 ವರ್ಷದ ಬಾಲಕ. ವಿರಾಜಪೇಟೆಯ ಕುಟ್ಟಂದಿಯ 48 ವರ್ಷದ ಪುರುಷ. ಸೋಮವಾರಪೇಟೆಯ ದೊಡ್ಡ ಹನಕೋಡುವಿನ 55 ವರ್ಷದ ಪುರುಷ. ಚೆಟ್ಟಳ್ಳಿ ಭೂತನಕಾಡುವಿನ 45 ವರ್ಷದ ಮಹಿಳೆ. ಸೋಮವಾರಪೇಟೆ ಒಂಟಿ ಅಂಗಡಿ ಅಭ್ಯತ್ ಮಂಗಲದ 25 ವರ್ಷದ ಮಹಿಳೆ. ಕುಶಾಲನಗರದ ತೊರೆನೂರುವಿನ 44 ವರ್ಷದ ಮಹಿಳೆ. ವಿರಾಜಪೇಟೆ ವಿಜಯನಗರದ 23 ವರ್ಷದ ಮಹಿಳೆ. ವಿರಾಜಪೇಟೆ ತೆಲುಗರ ಬೀದಿಯ 52 ವರ್ಷದ ಪುರುಷ. ವಿರಾಜಪೇಟೆಯ ಪೆರುಂಬಾಡಿಯ 55 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ. ಕುಶಾಲನಗರದ ತೊರೆನೂರುವಿನ 50 ವರ್ಷದ ಪುರುಷ. ಗೋಣಿಕೊಪ್ಪಲುವಿನ ಅಚ್ಚಪ್ಪ ಲೇಔಟ್ ನ 37 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗೌಳಿಬೀದಿಯ ಲೋಕಾಯುಕ್ತ ಕಟ್ಟಡದ 36 ವರ್ಷದ ಪುರುಷ. ಮಡಿಕೇರಿಯ ಪೋಲೀಸ್ ವಸತಿ ಗೃಹದ 47 ವರ್ಷದ ಪುರುಷ. ಮಡಿಕೇರಿಯ ಹೈವೇ ಹೊಟೇಲ್ ಹಿಂಭಾಗದ 25 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 610 ಆಗಿದ್ದು, 369 ಮಂದಿ ಗುಣಮುಖರಾಗಿದ್ದಾರೆ. 231 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 169 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment