ನಾಪೋಕ್ಲು : ತೋಟಗಾರಿಕೆ ಇಲಾಖೆ ವತಿಯಿಂದ ಕಿತ್ತಳೆ ಹಣ್ಣಿನ ಗಿಡ ವಿತರಣೆ
ವರದಿ :ಅಜರುದ್ದೀನ್ ವಯಕೋಲ್
ನಾಪೋಕ್ಲು (Times Of Coorg) : ತೋಟಗಾರಿಕೆ ಇಲಾಖೆವತಿಯಿಂದ ನಾಪೋಕ್ಲುವಿನ ಸುತ್ತ ಮುತ್ತಲಿನ ರೈತರೀಗೆ ಉಚಿತವಾಗಿ ಕಿತ್ತಳೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಪ್ರದೇಶವಾರು ಕ್ರಷಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುಮೋದನೆ ನೀಡಲಾದ ಕೆಲವೊಂದು ಯೋಜನೆಗಳ ಅಡಿಯಲ್ಲಿ ತೋಟಗಾರಿಕೆ ಇಲಾಖೆವತಿಯಿಂದ ಉಚಿತವಾಗಿ ರೈತರೀಗೆ ಬಿಡುಗಡೆ ಮಾಡಿದ ಯೋಜನೆಯಲ್ಲಿ ಅರ್ಜಿ ಹಾಕಿದ ಪ್ರತೀ ರೈತರೀಗೂ 56ಕಿತ್ತಳೆ ಹಣ್ಣುಗಳನ್ನು ಮತ್ತು ಅದಕ್ಕೆ ಪೂರಕವಾದ ಗೊಬ್ಬರದ ವ್ಯವಸ್ಥೆಯನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುರಳಿ ಕರುಂಬಮ್ಮಯ್ಯ ಅವರ ನಿರ್ದೇಶನ ಮತ್ತು ಸಹಕಾರದೊಂದಿಗೆ ನಡೆದ ವಿತರಣಾ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಮಾ ಪ್ರಭು,ಸನ್ನುವಂಡ ಕಾವೇರಪ್ಪ, ಸರ್ಕಾರಿ ತೋಟಗಾರಿಕೆ ಇಲಾಖ ಅಧಿಕಾರಿಗಳು ಮತ್ತು ರೈತರು ಹಾಜರಿದ್ದರು.

No comments
Post a Comment