ಸಿದ್ಧಾಪುರ : ನಿರ್ಬಂಧಿತ ಪ್ರದೇಶದ ಕುಟುಂಬಗಳಿಗೆ ಎಸ್.ಡಿ.ಪಿ.ಐ ಕಿಟ್ ವಿತರಣೆ

No comments

ಸಿದ್ದಾಪುರ (Times Of Coorg) : ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಸಿದ್ದಾಪುರ ವ್ಯಾಪ್ತಿಯ ನಿರ್ಬಂಧಿತ ಪ್ರದೇಶಗಳ ಕುಟುಂಬಗಳಿಗೆ ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರು ಆಹಾರ ಕಿಟ್ ವಿತರಿಸಿದರು.

ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗೋಡು ರಸ್ತೆ, ಹಳೇ ಸಿದ್ದಾಪುರ ಮತ್ತು ಎಂ.ಜಿ ರಸ್ತೆ ವ್ಯಾಪ್ತಿಯಲ್ಲಿ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ 12 ದಿನಗಳಿಂದ ಈ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿತ್ತು.
ಕಿಟ್ ವಿತರಣೆಯಲ್ಲಿ ಎಸ್‌.ಡಿ.ಪಿ.ಐ ಪ್ರಮುಖರಾದ ಅಶ್ರಫ್, ಜಂಶೀರ್, ಯಾಸರ್ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಶೌಕತ್ ಅಲಿ, ಶಂಸೀರ್ ಮತ್ತಿತರರು ಇದ್ದರು.



No comments

Post a Comment