ಕೊಡಗಿನಲ್ಲಿ 2 ಕೋವಿಡ್ ಪ್ರಕರಣಗಳು ಧೃಡ : ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ

No comments

ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು , ಸೋಂಕಿತರ ಸಂಖ್ಯೆ 42ಕ್ಕೇರಿದೆ. 3 ಪ್ರಕರಣಗಳು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸಕ್ರಿಯ 39 ಪ್ರಕರಣಗಳಿವೆ. ಒಟ್ಟು 19 ನಿಯಂತ್ರಿತ ವಲಯಗಳಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹೊಸ ಪ್ರಕರಣಗಳು :

1. ಜ್ವರದ ಲಕ್ಷಣವಿದ್ದ ಕುಶಾಲನಗರದ ಪದವಿ ಕಾಲೇಜು ಬಳಿ ಇರುವ ಅಣ್ಣೇಗೌಡ ಬಡಾವಣೆಯ ನಿವಾಸಿ 43 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

2. ವಿರಾಜಪೇಟೆಯ ಮೀನುಪೇಟೆ ನಿವಾಸಿ 41 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ವಿದೇಶದಿಂದ ಹಿಂದಿರುಗಿದವರಾಗಿದ್ದಾರೆ.

ಹೊಸದಾಗಿ ಕುಶಾಲನಗರದ ಅಣ್ಣೇಗೌಡ ಬಡಾವಣೆ ಮತ್ತು ವಿರಾಜಪೇಟೆ ನಗರದ ಮೀನುಪೇಟೆಯನ್ನು ನಿಯಂತ್ರಿತ ಪ್ರದೇಶವನ್ನು ಮಾಡಲಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ:42 ಕ್ಕೇರಿದ್ದು, 03 ಪ್ರಕರಣ ಬಿಡುಗಡೆಗೊಂಡಿರುತ್ತಾರೆ. 39 ಪ್ರಕರಣಗಳು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.  ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು-20 ಆಗಿರುತ್ತದೆ.

No comments

Post a Comment