ಬ್ಯಾಂಕ್ ಮ್ಯಾನೇಜರ್ ನಿಂದ ಹಣ ಕಟ್ಟಿಸಿದ ರೈತ ಸಂಘ
ಗೋಣಿಕೊಪ್ಪಲು TOC:- ರೈತ ಮಹಿಳೆಗೆ ಸಾಲ ಮಂಜೂರಾತಿ ಯಲ್ಲಿ ಅನ್ಯಾಯವನ್ನು ಖಂಡಿಸುವ ಮೂಲಕ ಬ್ಯಾಂಕ್ ಮ್ಯಾನೇಜರ್ ರವರಿಂದ ರೈತ ಮಹಿಳೆಗೆ ಸೇರಬೇಕಾದ ಹಣವನ್ನು ವಾಪಸು ಪಡೆದ ಅಪರೂಪ ಪ್ರಸಂಗ ಗೋಣಿಕೊಪ್ಪಲುವಿನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆಯಿತು.ರೈತರು ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರು.
ಹುದಿಕೇರಿ ಹೋಬಳಿಯ ರೈತ ಮಹಿಳೆ ಕಳೆದ ಮಾರ್ಚಿ ತಿಂಗಳಿನಲ್ಲಿ ಗ್ರಹ ಸಾಲ ಪಡೆಯಲು ಗೋಣಿಕೊಪ್ಪಲು ವಿನ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ರವರೊಂದಿಗೆ ಸತತ ಪತ್ರ ವ್ಯವಹಾರ ನಡೆಸಿದ್ದರು.ಆದರೂ ಅನಾವಶ್ಯಕ ತೊಂದರೆ ನೀಡುವ ಮೂಲಕ ರೈತ ಮಹಿಳೆಗೆ ಸಾಲ ಮಂಜೂರು ಮಾಡಿರಲಿಲ್ಲ. ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲೆಯ ಅಧ್ಯಕ್ಷರಾದ *ಕಾಡ್ಯಮಾಡ ಮನುಸೋಮಯ್ಯಮುಂದಾಳತ್ವದಲ್ಲಿ*
ಸೋಮವಾರ ಹಲವಾರು ರೈತರು ಬ್ಯಾಂಕ್ ಗೆ ತೆರಳಿ ಪ್ರತಿಭಟನೆ ನಡೆಸಿದರು.
ಮ್ಯಾನೇಜರ್ ಕಾರ್ಯವೈಖರಿ ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿಯ
ಸಭೆಯಲ್ಲಿ ಭಾಗವಹಿಸಿದ್ದ ಇಲ್ಲಿನ ಮ್ಯಾನೇಜರ್ ರವರನ್ನು ಪೋಲೀಸ್ ಠಾಣೆಯ ಠಾಣಾಧಿಕಾರಿ ಸುರೇಶ್ ಬೋಪಣ್ಣ ರವರ ಮೂಲಕ ಕರೆಸಿ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಹಲವಾರು ರೈತ ಮುಖಂಡರು ಧಿಕ್ಕಾರ ಕೂಗುವ ಮೂಲಕ ತಮ್ಮಲ್ಲಿದ್ದ ಅಸಮಾಧಾನ ಹೊರಹಾಕಿದರು.ಅಂತಿಮವಾಗಿ ಆಗಿರುವ ಪ್ರಮಾದಕ್ಕೆ ಮ್ಯಾನೇಜರ್ ಕ್ಷಮೆ ಕೋರಿ ಕೂಡಲೇ ಸಾಲ ಮಂಜೂರು ಮಾಡುತ್ತೇನೆ ಎಂದು ಹೇಳಿದರು ಆದರೆ ಇದಕ್ಕೆ ಮಹಿಳೆ ನಿರಾಕರಣೆ ಮಾಡುವ ಮೂಲಕ ಇಲ್ಲಿನ ತನಕ ಆಗಿರುವ ನಷ್ಟ ಪರಿಹಾರ ನೀಡುವಂತೆಯೂ ಬ್ಯಾಂಕಿಗೆ ನೀಡಿರುವ ದಾಖಲೆಗಳನ್ನು ವಾಪಾಸು ನೀಡುವಂತೆ ಪಟ್ಟು ಹಿಡಿದರು. ಅಂತಿಮವಾಗಿ ಠಾಣಾಧಿಕಾರಿಯ ಸಮ್ಮುಖದಲ್ಲಿ ಮಹಿಳೆಗೆ ಆದ ನಷ್ಟ ಪರಿಹಾರ ನೀಡುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ರೈತ ಮುಖಂಡರ ಸಮ್ಮುಖದಲ್ಲಿ ಮ್ಯಾನೇಜರ್ 40 ಸಾವಿರ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ ಚೆಕ್ ನೀಡಿದರು.
No comments
Post a Comment