ಕೊರೊನಾ ವೈರಸ್: ಎಲ್‍ಇಡಿ ವಾಹನದ ಮೂಲಕ ಜಾಗೃತಿ

No comments
 ಮಡಿಕೇರಿ TOC:-ಕೊರೊನಾ ವೈರಸ್ ಸಂಬಂಧಿಸಿದಂತೆ ಎಲ್‍ಇಡಿ ವಾಹನದ ಮೂಲಕ ಜಾಗೃತಿ ಕಾರ್ಯಕ್ರಮವು ಗುರುವಾರ ಮುರ್ನಾಡು, ನಾಪೋಕ್ಲು, ಚೇರಂಬಾಣೆ ಭಾಗಮಂಡಲದಲ್ಲಿ ನಡೆಯಿತು.
     ಫೆಬ್ರವರಿ 7 ರಂದು ವಿರಾಜಪೇಟೆ, ಗೋಣಿಗೊಪ್ಪ, ತಿತಿಮತಿ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ನಡೆಯಲಿದೆ. ಫೆಬ್ರವರಿ, 8 ರಂದು ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಶನಿವಾರಸಂತೆ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ನಡೆಯಲಿದೆ.
     ಗುರುವಾರ ಮೂರ್ನಾಡು ಗ್ರಾಮದಲ್ಲಿ ನಡೆದ ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮ ಸಂದರ್ಭದಲ್ಲಿ ಮೂರ್ನಾಡು ಗ್ರಾ.ಪಂ. ಅಧ್ಯಕ್ಷರಾದ ಜಮುನ, ಉಪಾಧ್ಯಕ್ಷರಾದ ಪವಿತ್ರ, ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಇತರರು ಇದ್ದರು

No comments

Post a Comment